ಮೂಡುಬಿದಿರೆಯಲ್ಲಿ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವ

0
18


ವರದಿ ರಾಯಿ ರಾಜ ಕುಮಾರ
ಮೂಡು ವೇಣು ಪುರದ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನ ಹಾಗೂ ವೆಂಕಟರಮಣ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಅಖಂಡ ಏಕಾಹ ಭಜನಾ ಅಮೃತ ಮಹೋತ್ಸವ ನವೆಂಬರ್ 26ರಿಂದ ಡಿಸೆಂಬರ್ 2 ರ ತನಕ ನಡೆಯಲಿದೆ. ವೆಂಕಟರಮಣ ದೇವಳದಲ್ಲಿ ಕಾಶಿ ಮಠಾಧೀಶ ಶ್ರೀಪಾದರ ಆಶೀರ್ವಾದದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ 26ರಂದು ವಿಷ್ಣು ಸಹಸ್ರನಾಮ ಹವನ, ಸ್ತೋತ್ರದ ಮಹಿಮೆಯ ಪ್ರವಚನ, 27ರಂದು ಹನುಮಪ್ರಿಯ ಸುಂದರಕಾಂಡ ಹವನ, ವಿದ್ವಾನ್ ಅನಂತ ಕೃಷ್ಣ ಆಚಾರ್ಯರಿಂದ ಸುಂದರಕಾಂಡ ಪ್ರವಚನ, ಎರಡು ದಿನಗಳ ಪರ್ಯಂತ ನಡೆದು 29ರಂದು ಪೂರ್ಣಾಹುತಿ ನಡೆಯಲಿದೆ. ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ. ನವೆಂಬರ್ 30ರಂದು ಹರಿವಾಯುಸ್ತುತಿ ಹವನ, ಪ್ರತಿದಿನವೂ ವಿಶೇಷ ಭಜನಾ ಸಂಕೀರ್ತನೆಗಳು, ನಡೆದು ಪ್ರತಿದಿನ ಅನ್ನಸಂತಾರ್ಪಣೆ ನಡೆಯಲಿದೆ.


ಡಿಸೆಂಬರ ಒಂದರಂದು 75 ವರ್ಷದ ಅಖಂಡ ಏಕಹ ಭಜನಾ ಮಹೋತ್ಸವದ ದೀಪ ಪ್ರಜ್ವಲನೆಯ ಮೂಲಕ ನಿರಂತರ 24 ಗಂಟೆಗಳ ಭಜನಾ ಸೇವೆ 30ಕ್ಕೂ ಹೆಚ್ಚು ತಂಡಗಳಿಂದ ನಡೆಯಲಿದೆ. ಡಿಸೆಂಬರ್ 2 ರಂದು ಬೆಳಗ್ಗೆ ಮುಕ್ಕೋಟಿ ದ್ವಾದಶಿ ಉತ್ಸವ ದೊಂದಿಗೆ ಏಕಾಹ ಭಜನಾ ಮಂಗಲೋತ್ಸವ ಜರಗದಲಿದೆ.
ವೆಂಕಟರಮಣ ಭಜನಾ ಮಂಡಳಿಯು ಎಲ್ಲಾ ದೇವಾಲಯಗಳ ಭಜನಾ ಸಪ್ತಾಹಗಳಲ್ಲಿ ಭಾಗವಹಿಸಿದ ಕಾರಣ ಎಲ್ಲರೂ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲ ಮಕ್ಕಳು ಈ ಕಾರ್ಯದಲ್ಲಿ ತೊಡಗಿ ಕೊಳ್ಳುತ್ತಿರುವುದರಿಂದಾಗಿ ಎಲ್ಲರ ಸಹಕಾರ ಕೂಡಿಬಂದಿದೆ. ಭಜನಾ ಮಂಡಳಿಯಲ್ಲಿ 30ಕ್ಕೂ ಮಿಕ್ಕಿ ಸದಸ್ಯರಿದ್ದು 15 ಮಂದಿ ನಿರಂತರವಾಗಿ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವರ ಮೇಲಿನ ಭಕ್ತಿ, ಶೃದ್ಧೆಯೇ ನಮ್ಮ ಬಂಡವಾಳ.
ಹಿರಿಯ ಚೇತನಗಳಾದ ಪುಂಡಲಿಕ ಶೆಣೈ, ವಾಸುದೇವ ಪೈ, ಪುರುಷೋತ್ತಮ ಶೆಣೈ ಅವರುಗಳ ಪ್ರಾರಂಭಿಕ ನಗರ ಭಜನೆಯಿಂದ ಪ್ರೇರಣೆ ಪಡೆದು ಭಜನಾ ಮಂಡಳಿ ರೂಪುಗೊಂಡಿತು. ಕಳೆದ 52 ವರ್ಷಗಳಿಂದ ನಾಗೇಂದ್ರ ಭಟ್ ಅವರು ಅನುಚಾನವಾಗಿ ಭಜನಾ ಕೈಂಕರ್ಯದಲ್ಲಿ ತೊಡಗಿ, ನಮ್ಮೊಂದಿಗೆ ಇದ್ದಾರೆ.
ಪ್ರಸ್ತುತ ಎಲ್ಲರ ಮುತುವರ್ಜಿಯಿಂದ ಸಕಲ ಸಿದ್ಧತೆಗಳು ನಡೆಯುತ್ತಿದೆ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನ ಸೇರುವ ಸಂಭವವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ತುಕಾರಾಮ ಮಲ್ಯ, ದೇವಳದ ಆಡಳಿತ ಮುಕ್ತೇಸರ ಜಿ ಉಮೇಶ್ ಪೈ, ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಮನೋಜ್ ಶೆಣೈ, ರಘುವೀರ ಶೆಣೈ, ಕಛೇರಿಯ ರವಿಕಾಂತ ನಾಯಕ್, ವಿಘ್ನೇಶ್ ಹಾಜರಿದ್ದರು. ಟ್ರಸ್ಟ್ ನ ರಾಮನಾಥ್ ಭಟ್ ಸ್ವಾಗತಿಸಿದರು. ರಾಜೇಶ್ ಮಲ್ಯ ವಂದಿಸಿದರು.
.

LEAVE A REPLY

Please enter your comment!
Please enter your name here