ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ನಗರದ ಅಭ್ಯಾಸ ವರ್ಗ ಕಾರ್ಯಕ್ರಮ

0
52

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕಾತ್ಯಾಯಿನಿ ಮಂಟಪ , ಕಡಿಯಾಳಿಯಲ್ಲಿ ದಿನಾಂಕ 10-10-2025 ರಂದು ನಗರದ ಅಭ್ಯಾಸ ವರ್ಗವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ|ಪ್ರವೀಣ್ ಆಚಾರ್ಯ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಂಚಾಲಕರಾದ ಸುವಿತ್ ಶೆಟ್ಟಿ , ಪ್ರಾಂತ ವಿದ್ಯಾರ್ಥಿನಿ ಸಹ ಪ್ರಮುಖ್ ಸಂಹಿತಾ ಕೆ ಮತ್ತು ಉಡುಪಿ ಜಿಲ್ಲಾ ಸಂಚಾಲಕರಾದ ಶ್ರೇಯಸ್ ಅಂಚನ್ ಉಪಸ್ಥಿತರಿದ್ದರು.

ಮೊದಲ ಅವಧಿ ಸೈದ್ಧಾಂತಿಕ ಭೂಮಿಕೆ ಆಗಿದ್ದು , ಈ ಅವಧಿಯನ್ನು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಶ್ರೀವತ್ಸ ಡಿ ಗಾಂವ್ಸಕರ್ ಅವರು ನಡೆಸಿಕೊಟ್ಟರು. ಎರಡನೆಯ ಅವಧಿಯು ಕ್ಯಾಂಪಸ್ ಕಾರ್ಯವಾಗಿದ್ದು, ಈ ಅವಧಿಯನ್ನು ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಕಾರ್ಕಳ ಇವರು ನೇರವೇರಿಸಿದರು. ಕಾರ್ಯಕ್ರಮದ ಕೊನೆಯ ಅವಧಿಯು ಪ್ರಶಿಕ್ಷಣವಾಗಿದ್ದು, ವಿಭಾಗ ಎಸ್.ಎಫ್.ಎಸ್ ಸಂಯೋಜಕರಾದ ಅನಂತಕೃಷ್ಣ ಇವರು ನಡೆಸಿದರು.

ಸಮಾರೋಪ ಸಮಾರಂಭ , 2025-26ನೇ ಸಾಲಿನ ನೂತನ ಕಾರ್ಯಕಾರಿಣಿ ಜವಾಬ್ದಾರಿಯನ್ನು ಜಿಲ್ಲಾ ಪ್ರಮುಖರಾದಂತಹ ರಾಜಶಂಕರ್ ಇವರು ನಡೆಸಿಕೊಟ್ಟರು. ನಗರ ಅಧ್ಯಕ್ಷರಾಗಿ ಡಾ ಸದಾನಂದ್ ಭಟ್, ನಗರ ಉಪಾಧ್ಯಕ್ಷರಾಗಿ ಪ್ರವೀಣ್ ಆಚಾರ್ಯ ಮತ್ತು ನಗರ ಕಾರ್ಯದರ್ಶಿಯಾಗಿ ಮನೀಶ್ ಕುಂದರ್ ಸೇರಿದಂತೆ ನಗರದ ಕಾರ್ಯಕಾರಿಣಿಯ ಅನೇಕ ಜವಾಬ್ದಾರಿಗಳು ಈ ಸಂದರ್ಭದಲ್ಲಿ ಘೋಷಣೆಗೊಂಡವು. ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮರಾಠಿ ಮತ್ತು ತಾಲೂಕು ಸಂಚಾಲಕರಾದ ಮಾಣಿಕ್ಯ ಭಟ್ ಇವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಅನುಷಾ ಇವರು ನಿರೂಪಿಸಿದರು.

LEAVE A REPLY

Please enter your comment!
Please enter your name here