ಅಳದಂಗಡಿ: ಮಕ್ಕಳ ಅಭಿರುಚಿಗಳನ್ನು ತಿಳಿದುಕೊಂಡು ಅವರಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡುವುದು ಪೋಷಕರ ಜವಾಬ್ದಾರಿ ಆಗಿದೆ. ಮಕ್ಕಳು ಸಮಾಜಮುಖಿಯಾಗಿ ಬೆಳೆಯಲು ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪಾಲಕರ ಮಾರ್ಗದರ್ಶನ ಅಗತ್ಯವಿದೆ ಎಂದು ಎಂದು ಗುರುವಾಯನಕೆರೆ ಎಕ್ಸಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.
ಅಳದಂಗಡಿಯಲ್ಲಿ ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ವತಿಯಿಂದ ಪ್ರತಿಷ್ಠಾನದ ಕಚೇರಿ, ಸೇವಾ ಪ್ರತಿಷ್ಠಾನ ಉದ್ಘಾಟನೆ, ಪತ್ರಕರ್ತರಿಗೆ ಸನ್ಮಾನ, ಕವಿಗೋಷ್ಠಿ, ಹಾಡು, ಯಕ್ಷಗಾನ ತರಬೇತಿ ತರಗತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಸಕ ಹರೀಶ್ ಪೂಂಜ ಪ್ರತಿಷ್ಠಾನದ ಕಚೇರಿ ಉದ್ಘಾಟಿಸಿದರು. ಆಮಂತ್ರಣ ಸೇವಾ ಪ್ರತಿಷ್ಠಾನ ಗೌರವಾಧ್ಯಕ್ಷ ಶಿವಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ವಿಜಯ್ ಕುಮಾರ್ ಜೈನ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪ್ರತಿಷ್ಠಾನ ಗೌರವ ಸಲಹೆಗಾರ ಕಿರಣ್ ಡಿ. ಪುಷ್ಪಗಿರಿ ಅಶರು ಸೇವಾ ಪ್ರತಿಷ್ಠಾನ ಉದ್ಘಾಟಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ದೇವದಾಸ್ ಎಸ್. ಶೆಟ್ಟಿ ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ವಿಜಯ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅರುಣ್ ಅರುವ, ಸದಾನಂದ ಬಿ.ಕುದ್ಯಾಡಿ, ಪ್ರತಿಷ್ಠಾನದ ಪದಾಧಿಕಾರಿಗಳು ಸಹಕರಿಸಿದರು.
ಸನ್ಮಾನ
ಆಳದಂಗಡಿಯಲ್ಲಿ ಗುರುವಾಯನಕೆರೆ ಎಕ್ಸಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ತಾಲೂಕಿನ ಹಿರಿಯ ಪತ್ರಕರ್ತರಾದ ನಾಭಿರಾಜ್. ಪೂವಣಿ, ಬಿ.ಎಸ್.ಕುಲಾಲ್, ಮನೋಹರ್ ಬಳಂಜ, ಜಾರಪ್ಪ ಪೂಜಾರಿ ಬೆಳಾಲು, ಚೈತೇಶ್ ಇಳಂತಿಲ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಆಕಾ ಕಾರ್ಯಕರ್ತೆಯರಾದ ಅಳದಂಗಡಿಯ ಪದ್ಮಿನಿ ಜೆ.ಶೆಟ್ಟಿ, ಕರಂಬಾರಿನ ಗುಲಾಬಿ ಶೆಟ್ಟಿ, ತೆಂಕಕಾರಂದೂರಿನ ಗುಲಾಬಿ ಎಂ.ಎನ್. ಅವರನ್ನು ಸನ್ಮಾನಿಸಲಾಯಿತು. ನೀರಿನ ತಜ್ಞರಾಗಿ 8,000 ಕಡೆ ನೀರು ಗುರುತಿಸಿರುವ ಅಳದಂಗಡಿಯ ಸುಲೇಮಾನ್ ಶಾಫಿ, ಚಿತ್ರ ಕಲಾವಿದೆ ರಾಜೇಶ್ವರಿ ಕೆ. ಆಚಾರ್ಯ ಗುರುವಾಯನಕೆರೆ, ಭಜನಾ ಕಲಾವಿದ ಮಂಜುನಾಥ ಆಚಾರ್ಯ ಅಳದಂಗಡಿ, ಯಕ್ಷಗಾನ ಕಲಾವಿದ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಅವರನ್ನು ಸನ್ಮಾನಿಸಲಾಯಿತು.
ಕವಿಗೋಷ್ಠಿ
ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ‘ಕವಿಗೋಷ್ಠಿ’ ವಿಂದ್ಯಾ ಎಸ್. ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕವಿಗಳಾದ ಶ್ಯಾಮ್ ಪ್ರಸಾದ್ ಭಟ್, ತೆಳ್ಳಾರು ಕಸ್ತೂರಿ ಜಯರಾಮ್ ಕಾವೂರು, ಪರ್ಣಶಾ ತಿರುಮಲೇಶ್ ಶಿಶಿಲ, ಸ್ವಾತಿ ಸೂರಜ್ ಶಿಶಿಲ, ಸುಮಂಗಲ ಕಿಣಿ ಮೂಡುಬಿದಿರೆ, ವನಜಾ ಜೋಶಿ ಬೆಳ್ತಂಗಡಿ, ಅಕ್ಷತಾ ಅಡೂರ್, ನಿರೀಕ್ಷಿತಾ ಮಂಗಳೂರು, ವಿದ್ಯಾಶ್ರೀ ಅಡೂರು, ಆಶಾ ಅಡೂರು, ಸುಮಾ ಉಜಿರೆ, ಅನಿತಾ ಶೆಟ್ಟಿ ಮೂಡುಬಿದಿರೆ, ಸುಮತಿ ಪಿ.ಕಾರ್ಕಳ, ಅನ್ನಪೂರ್ಣ ಶ್ಯಾನುಬೋಗ್ ಅಂಬಲಪಾಡಿ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಧನ್ಯಶ್ರೀ ಬೆಳಾಲು, ಶಾಲಿನಿ ಕೆಮ್ಮಣ್ಣು, ಮಾಲತಿ ರಮೇಶ್ ಕೆಮ್ಮಣ್ಣು, ಭಾರತಿ ಪರ್ಕಳ ಭಾಗವಹಿಸಿದ್ದರು.