ಅಳದಂಗಡಿ: ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

0
178

ಅಳದಂಗಡಿ: ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ( ರಿ) ಅಳದಂಗಡಿ ಇದರ ವಾರ್ಷಿಕ ಮಹಾಸಭೆಯನ್ನು 1/9/2025 ಸೋಮವಾರದಂದು, ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಸಲಾಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಭಾರತೀಯವರು ವಹಿಸಿದ್ದರು. ವಾರ್ಷಿಕ ಮಹಾಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು, ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳಕು ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ಸುಪ್ರಿಯಾ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. LCRP ಸುಜಾತರವರು ಮಹಾಸಭೆಗೆ ಬಂದಂತಹ ಎಲ್ಲಾ ಗಣ್ಯರನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಎಂ.ಬಿ.ಕೆ ಶ್ರೀಮತಿ ಹರ್ಷಲಾ ಒಕ್ಕೂಟದ 1 ವರ್ಷದ ವರದಿ ಹಾಗೂ ಜಮಾ- ಖರ್ಚಿನ ವರದಿಯನ್ನು ಮಂಡಿಸಿದರು. ಅದರ ಅನುಮೋದನೆಯನ್ನು ಪಡೆಯಲಾಯಿತು. ತಾಲೂಕು ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಸಂಜೀವಿನಿ ಯೋಜನೆಯ ಬಗ್ಗೆ ದ್ಯೇಯೋದ್ದೇಶಗಳ ಬಗ್ಗೆ, ಜೀವನೋಪಾಯ ಚಟುವಟಿಕೆ, ವಾರ್ಡರಚನೆ ಒಕ್ಕೂಟದ ಬಗ್ಗೆ, ಹಾಗೂ ಇತರ ಹಲವಾರು ವಿಷಯಗಳ ಬಗ್ಗೆ ಸವಿ ವಿಸ್ತಾರವಾಗಿ ಮಾಹಿತಿಯನ್ನು ಸದಸ್ಯರಿಗೆ ನೀಡಿದರು. ಹಾಗೂ ಮಾದಕ ಪದಾರ್ಥಗಳ ವ್ಯಸನ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ಪ್ರತಿಜ್ಞೆಯನ್ನು ಮಾಡಿಸಿದರು.

ತಾಲೂಕು BRP-PRI ಶ್ರೀ ಕಲಾ ರವರು VPRP Concept ಸೀಡಿಂಗ್ ನ್ನು ನೀಡಿ, VPRP ಯ ದ್ಯೇಯೋದೇಶವನ್ನು ತಿಳಿಸಿದರು. ಒಕ್ಕೂಟದ ಅಧ್ಯಕ್ಷರು ಒಕ್ಕೂಟದ ಮಹಾ ಸಭೆಯ, ಸಂಜೀವಿನಿ ಗುಂಪಿನ ಪ್ರಯೋಜನಗಳ ಬಗ್ಗೆ ಹಲವಾರು ಮಾಹಿತಿಯನ್ನು ನೀಡಿದರು. ಈ ಸಭೆಯಲ್ಲಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು, ತಾಲೂಕು ವಲಯ ಮೇಲ್ವಿಚಾರಕರು, ತಾಲೂಕ್ BRP-PRI, ಪಂಚಾಯತ್ ಲೆಕ್ಕ ಸಹಾಯಕರು, MBK, LCRP ಗಳು, ಕೃಷಿಸಖಿ ಪಶುಸಖಿ, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. LCRP ಆಶಾ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಪಶುಸಖಿ ರತ್ನ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

LEAVE A REPLY

Please enter your comment!
Please enter your name here