ಅಲಂಗಾರು ಲಯನ್ಸ್ ಕ್ಲಬ್ ವತಿಯಿಂದ ಪಾಲಡ್ಕ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಕೊಡುಗೆ

0
122

ಮೂಡುಬಿದಿರೆ: ಪಾಲಡ್ಕ ಅಂಗನವಾಡಿ ಮಕ್ಕಳಿಗೆ ಅಲಂಗಾರು ಲಯನ್ಸ್ ಕ್ಲಬ್ ವತಿಯಿಂದ ಒದಗಿಸಲಾದ ಸಮವಸ್ತ್ರದ ವಿತರಣೆ ಕಾರ್ಯಕ್ರಮ ಆ. ೧೩ರಂದು ನಡೆಯಿತು. ಅಂಗನವಾಡಿಯ ೨೦ ಮಂದಿ ಪುಟಾಣಿಗಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಅಂಗನವಾಡಿ ಶಿಕ್ಷಕಿ ಸ್ವಾಗತಿಸಿದರು. ಲಯನ್ಸ್ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಶುಭ ಕೋರಿದರು.
ಸೇವಾ ಕಾರ್ಯಕ್ರಮದ ರೂವಾರಿ ಲl ಆಲ್ವಿನ್ ಡಿಕುನ್ನಾ, ಲl ಮೆಲಿಟಾ, ಲl ಲವಿಟಾ, ಲl ಫೆಲಿಕ್ಸ್, ಲl ವಲೇರಿಯನ್, ಲl ಮೈಕಲ್, ಲl ರಿಚ್ಚರ್ಡ್ ಬರ್ಬೊಜ ಹಾಜರಿದ್ದರು.

LEAVE A REPLY

Please enter your comment!
Please enter your name here