ಮೂಡುಬಿದಿರೆ: ಅಪರೇಷನ್ ವಿಜಯ್‌ನಲ್ಲಿ ಭಾಗವಹಿಸಿದ ಯೋಧ ಹವಲ್ದಾರ್ ಲ್ಯಾನ್ಸಿ ಮೆಂದ ಇವರನ್ನು ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಅಲಂಗಾರು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಪುತ್ತಿಗೆ ಗ್ರಾಮದ ಸಂಪಿಗೆಯಲ್ಲಿರುವ ಲ್ಯಾನ್ಸಿ ಅವರ ಮನೆಗೆ ಕ್ಲಬ್‌ನ ಪದಾಧಿಕಾರಿಗಳು ತೆರಳಿ ಕುಟುಂಬದವರ ಸಮ್ಮುಖದಲ್ಲಿ ಅವರನ್ನು ಗೌರವಿಸಲಾಯಿತು. 1999ರ ಕಾರ್ಗಿಲ್ ಯುದ್ದದಲ್ಲಿ ತೀವ್ರ ಗಾಯಗೊಂಡ ಲ್ಯಾನ್ಸಿ ಮೆಂದ ನಂತರ ಚೇತರಿಸಿಕೊಂಡು 2009ರಲ್ಲಿ ನಿವೃತ್ತಿಯನ್ನು ಪಡೆದಿದ್ದಾರೆ.
ಲಯನ್ಸ್ ಅಧ್ಯಕ್ಷ ಅಮಿತ್ ಡಿಸಿಲ್ವ, ಕಾರ್ಯದರ್ಶಿ ರಿಚರ್ಡ್ ಡಿಸೋಜ, ಕೋಶಾಧಿಕಾರಿ ರಾಕಿ ಮಸ್ಕರನೇಸ್ ಸಹಿತ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.