ವರದಿ ರಾಯಿ ರಾಜ ಕುಮಾರ
ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಜ್ಯೋತಿಷ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅಲಂಗಾರು ಸುಬ್ರಹ್ಮಣ್ಯ ಭಟ್ ಮತ್ತು ಸುಜಾತ ಭಟ್ ಅವರ ಸುಪುತ್ರ ಸುಮಂತ್ ಭಟ್ ಸತತ ಮೂರನೇ ಬಾರಿ ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಜೇತರಾಗಿದ್ದಾರೆ. ಇವರು ಅಲಂಗಾರು ಈಶ್ವರ ಭಟ್ ಅವರ ಮೊಮ್ಮಗ.
ಈ ಪ್ರಶಸ್ತಿಯಿಂದ ಅವರು ಮತ್ತೊಮ್ಮೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಭಾಗವಹಿಸಲು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ರಾಷ್ಟ್ರಮಟ್ಟದಲ್ಲಿಯೂ ಮತ್ತೊಮ್ಮೆ ಮಿಂಚುವ ಸೌಭಾಗ್ಯ ದೊರಕಲಿ ಎಂದು ಹಾರೈಸುತ್ತೇವೆ.
.

