ಉಡುಪಿ: ಅಖಿಲ ಭಾರತ ದೈವರಾಧಕರ ಒಕ್ಕೂಟ ( ರಿ ) ಕೇಂದ್ರೀಯ ಉಡುಪಿ ಜಿಲ್ಲೆ ವತಿಯಿಂದ ದೈವರಾಧನೆ ಕ್ಷೇತ್ರದಲ್ಲಿ ದೈವದ ದರ್ಶನ ಪಾತ್ರಿಯಾಗಿ ಸುಮಾರು 30 ವರ್ಷ ಹೆಚ್ಚು ಬಹಳ ನಿಷ್ಠೆಯಿಂದ ದೈವ ಚಾಕ್ರಿ ಮಾಡಿದಂತ ಜಯ ಪೂಜಾರಿ ಕೊಳಲುಗಿರಿ ಹಾವಂಜೆ ಅವರ ಮನೆಗೆ ಭೇಟಿಯಾಗಿ ಒಕ್ಕೂಟದ ವತಿಯಿಂದ ತುಳುನಾಡ ದೈವರಾಧನೆ ಮಾಣಿಕ್ಯರತ್ನ ಎಂಬ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಉಪಾಧ್ಯಕ್ಷರಾದ ಉದಯ ಮೆಂಡನ್, ನವೀನ್ ಪಾತ್ರಿ, ವಾಸು ಶೇರಿಗಾರ ಹಾಗೂ ಗೋಪಾಲ್ ಮಡಿವಾಳ, ಸಮಿತ ಶೆಟ್ಟಿ ಉಪಸ್ಥಿತರಿದ್ದರು.

