ಮಂಗಳೂರು: ಮಂಗಳೂರಿನಿಂದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರವನ್ನು ಕೋಣಾಜೆಗೆ ಸ್ಥಳಾಂತರಿಸುವ ವಿಶ್ವವಿದ್ಯಾನಿಲಯ ನಿರ್ಧಾರವನ್ನು ಹಿಂಪಡೆಯುವಂತೆ ಸಲಹೆ ನೀಡಲು ಅಖಿಲ ಭಾರತ ತುಳು ಒಕ್ಕೂಟ (ರಿ.)ಸ್ಪೀಕರ್ ಯು.ಟಿ.ಖಾದರ್‌ಗೆ ಮನವಿ ಸಲ್ಲಿಸಿದೆ.
2018ರಲ್ಲಿ ವಿಶ್ವ ವಿದ್ಯಾನಿಲಯದ ಹಂಪನಕಟ್ಟೆಯ ಸಂಧ್ಯಾ ಕಾಲೇಜಿನಲ್ಲಿ ಪ್ರಾರಂಭಿಸಿದ ತುಳು ಎಂ.ಎ.ಸ್ನಾತಕೋತ್ತರ ಪದವಿ ಅಧ್ಯಯನವು ತುಳುನಾಡ ಜನರಿಗೆ ನೀಡಿದ ಅತ್ಯಂತ ಪ್ರಮುಖ ಕೊಡುಗೆಯಾಗಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳಿದ್ದು ಅನುಕೂಲವಾಗಿರುತ್ತದೆ. ಇದೀಗ ಈ ಅಧ್ಯಯನ ಕೇಂದ್ರವನ್ನು ಕೋಣಾಜೆಯ ಮಂಗಳಗಂಗೋತ್ರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿರುವುದುಇದಕ್ಕೆ ಅಖಿಲ ಭಾರತ ತುಳು ಒಕ್ಕೂಟ ಹಾಗೂ ಸರ್ವಧರ್ಮದ ತುಳುವರು ಈ ನಿರ್ಧಾರವನ್ನು ಹಿಂತೆಗೆಯಲು ವಿಶ್ವವಿದ್ಯಾನಿಲಯವನ್ನು ಆಗ್ರಹಿಸುತ್ತಿದೆ.
ಬಹಳಷ್ಟು ವಿದ್ಯಾರ್ಥಿಗಳು ಹಗಲಿನಲ್ಲಿ ಬೇರೆ ಬೇರೆ ಕೆಲಸದಲ್ಲಿ ತೊಡಗಿ ಸಂಜೆ ವೇಳೆ ನಗರದ ಮಧ್ಯ ಭಾಗದಲ್ಲಿರುವ ಈ ಕೇಂದ್ರವು ಅತ್ಯಂತ ಎಲ್ಲಾ ರೀತಿಯಲ್ಲೂ ಅನುಕೂಲವಾಗಿರುತ್ತದೆ. ಕೋಣಾಜೆಗೆ ಸ್ಥಳಾಂತರಿಸಿದ್ದಲ್ಲಿ ಖಂಡಿತವಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿ ವಿದ್ಯಾರ್ಥಿಗಳ ಸಂಖ್ಯೆ ದುರ್ಬಲವಾಗುವುದರಲ್ಲಿ ಸಂದೇಹವಿಲ್ಲ.
ಮನವಿಗೆ ಸ್ಪಂದಿಸಿದ ಯು.ಟಿ.ಖಾದರ್ ವಿಶ್ವವಿದ್ಯಾನಿಲಯದ ಕುಲಪತಿಗಳೊಡನೆ ಚರ್ಚಿಸಿ, ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮನವಿಗೆ ಸ್ಪಂದಿಸದಿದ್ದಲ್ಲಿ ಹೋರಾಟಕ್ಕೆ ರೂಪುರೇಖೆ: ಒಂದು ವೇಳೆ ತುಳುವರ ಮನವಿಗೆ ಸ್ಪಂದಿಸದಿದ್ದಲ್ಲಿ ಜಿಲ್ಲೆಯ ಸಮಸ್ತ ತುಳುವರು, ಸಂಘ ಸಂಸ್ಥೆಗಳು ಅಖಿಲ ಭಾರತ ತುಳು ಒಕ್ಕೂಟದ ನೇತೃತ್ವದಲ್ಲಿ ಯಾವುದೇ ಹೋರಾಟಕ್ಕೆ ಸಿದ್ಧವಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ರೂಪುರೇಖೆಯನ್ನು ಸಿದ್ಧಪಡಿಸಲಿದೆ.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ಪಿ.ಎ. ಪೂಜಾರಿ, ಮೂಡದ ಅಧ್ಯಕ್ಷ ಸದಾಶಿವ ಉಳ್ಳಾಲ ಮತ್ತು ಒಕ್ಕೂಟದ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.