ಅಖಿಲ ಭಾರತ ತುಳು ಒಕ್ಕೂಟ (ರಿ.): ತುಳು ಭಾಷೆ, ಸಂಸ್ಕೃತಿ ಬಲವರ್ಧನೆಗೆ ನಿರಂತರ ತುಳುವರು ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ: ಒಡಿಯೂರು ಶ್ರೀ

0
137


ಮಂಗಳೂರು: ತುಳು ಭಾಷೆ, ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸಿ, ಇದರ ಬಲವರ್ಧನೆಗೆ ದೇಶ ವಿದೇಶದ ಸಮಸ್ತ ಜಾತ್ಯಾತೀತ ತುಳುವರು, ತುಳು ಭಾಷೆ ಸಂಘ ಸಂಸ್ಥೆಗಳು ಜೊತೆಯಾಗಿ ಒಗ್ಗಟ್ಟಾಗಿ ನಿರಂತರ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಒಡಿಯೂರು ಶ್ರೀಗಳು ಅಖಿಲ ಭಾರತ ತುಳು ಒಕ್ಕೂಟದ ಪದಾಧಿಕಾರಿಗಳ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಸಲಹೆ ನೀಡಿದರು.
ತುಳು ಭಾಷೆಯ ಉನ್ನತೀಕರಣಕ್ಕಾಗಿ ಕರ್ನಾಟಕ ಸರಕಾರವು ಮಂಗಳೂರು ವಿಶ್ವವಿದ್ಯಾನಿಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಧ್ಯಾ ಕಾಲೇಜಿನಲ್ಲಿ ಪ್ರಾರಂಭಿಸಿ, ಕಾರ್ಯ ನಿರ್ವಹಿಸುತ್ತಿದ್ದ ತುಳು (ಸ್ನಾತಕೋತ್ತರ) ಎಂ.ಎ. ಅಧ್ಯಯನ ಕೇಂದ್ರವನ್ನು ದೂರದಲ್ಲಿರುವ ಮಂಗಳ ಗಂಗೋತ್ರಿಯ ಕೋಣಾಜೆಗೆ ಸ್ಢಳಾಂತರಿಸಲು ಸಿದ್ಧತೆಗಳು ನಡೆಯುತ್ತಿದೆ ಎನ್ನಲಾದ ಮಾಹಿತಿಯನ್ನು ಶ್ರೀಗಳ ಗಮನಕ್ಕೆ ತಂದರು.
ಅಖಿಲ ಭಾರತ ತುಳು ಒಕ್ಕೂಟ ದೇಶ ವಿದೇಶಗಳಲ್ಲಿ 48 ತುಳು ಸೇವಾ ಸಂಘ ಸಂಸ್ಥೆಗಳು ಇದರ ಸದಸ್ಯರಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿ ನಿರಂತರ ತುಳು ಸಂಬAಧಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವುದು ಸಂತಸದ ಸಂಗತಿ ಎಂದ ಅವರು ಇದನ್ನು ಇನ್ನಷ್ಟು ಬಲಪಡಿಸಬೇಕೆಂದು ಶ್ರೀಗಳು ಅಭಿಪ್ರಾಯ ಪಟ್ಟರು.
ಒಕ್ಕೂಟದ ಕಳೆದ ಹಲವಾರು ವರ್ಷಗಳ ತುಳು ಭಾಷೆ ಬಲವರ್ಧನೆಗೆ ಕೈಗೊಂಡ ಕಾರ್ಯಕ್ರಮ, ಸಮಾವೇಶ, ಸಮ್ಮೇಳನ ಹಾಗೂ ಸಮಾರಂಭಗಳ ಬಗ್ಗೆ ಶ್ರೀಗಳ ಗಮನಕ್ಕೆ ತಂದ ಅಧ್ಯಕ್ಷ ಎ.ಸಿ. ಭಂಡಾರಿಯವರು ಮುಂದಿನ ಕಾರ್ಯ ಯೋಜನೆಯ ಬಗ್ಗೆ ಸಲಹೆ, ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ಪಿ.ಎ.ಪೂಜಾರಿ, ಪ್ರಶಾಂತ್ ಶೆಟ್ಟಿ ಕಡಬ ಉಪಸ್ಥಿತರಿದ್ದರು.

ಮುಲ್ಕಿ ಕರುಣಾಕರ ಶೆಟ್ಟಿ
9880425265

LEAVE A REPLY

Please enter your comment!
Please enter your name here