ಹೆಬ್ರಿ : ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ವತಿಯಿಂದ ಕಬ್ಬಿನಾಲೆ ಕೊಂಕಣಾರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದು ಸ್ಟೀಲಿನ ಕಪಾಟು ಮತ್ತು ಪುಸ್ತಕ ಇಡುವ ಮರದ ಸೆಲ್ಫ್ ನ್ನು ನೀಡುವ ಹಸ್ತಾಂತರ ಕಾರ್ಯಕ್ರಮವು ಶಾಲೆಯಲ್ಲಿ ಜ. 14 ರಂದು ನಡೆಯಿತು.
ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾದ ಕೆ. ರಾಮಚಂದ್ರ ಭಟ್ ಮತ್ತು ಸುನಿತ ಹೆಬ್ಬಾರ್ ರವರು ಶಾಲೆಯ ಮುಖ್ಯ ಶಿಕ್ಷಕಿಯವರಿಗೆ ಒಟ್ಟು ರೂ. 21000 ಮೌಲ್ಯದ ಕಪಾಟು ಮತ್ತು ಸೆಲ್ಫ್ ನ್ನು ಹಸ್ತಾಂತರಿಸಿದರು.
ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿಯ ಅಧ್ಯಕ್ಷರು ಮಾತನಾಡಿ ಶಾಲೆಗೆ ಅಗತ್ಯವಾದ ವಸ್ತು ಗಳನ್ನು ನೀಡಿದ್ದೇವೆ. ನಿಮ್ಮ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಶಾಲೆ ಗೋಡೆಗೆ ಸುಣ್ಣ ಬಣ್ಣ ಬಳಿಯುವ ಕಾರ್ಯಕ್ಕೆ ಕ್ಲಬ್ ವತಿಯಿಂದ ಸಹಾಯ ಮಾಡುವ ಭರವಸೆ ನೀಡುತ್ತೇನೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸೀತಾರಾಮ್ ಕುಲಾಲ್, ಕ್ಲಬ್ಬಿನ ಕಾರ್ಯದರ್ಶಿ ಬಾಲಚಂದ್ರ ಎಂ, ಮಹಿಳಾ ಕ್ಲಬ್ಬಿನ ಕಾರ್ಯದರ್ಶಿ ರಮ್ಯಕಾಂತಿ, ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ಪೂಜಾರಿ, ಪಲ್ಲವಿ ಎಸ್. ರಾವ್ ಹಾಗೂ ಕ್ಲಬ್ಬಿನ ಸದಸ್ಯರಾದ ಶ್ರೀಧರ ಹೆಬ್ಬಾರ್ ಕಾಪೋಳಿ, ಇಂದಿರಾ ಬಾಯರಿ ಉಪಸ್ಥಿತರಿದ್ದರು .
ಶಾಲಾ ಮುಖ್ಯ ಶಿಕ್ಷಕಿ ಆಶಾ ಹೆಬ್ಬಾರ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿಯರು, ಶಾಲಾ ಮಕ್ಕಳು ಹಾಜರಿದ್ದರು.ಮಕರ ಸಂಕ್ರಮಣ ಪ್ರಯುಕ್ತ ಶಾಲೆಯ ಎಲ್ಲಾ ಮಕ್ಕಳಿಗೆ ಎಳ್ಳು ಬೆಲ್ಲ ಹಂಚಲಾಯಿತು.

