ಆಳ್ವಾಸ್ ಶಿಸ್ತು,ಸಂಯಮ,ಗುಣಮಟ್ಟದ ಬದ್ಧತೆಯಲ್ಲಿ ಕರ್ನಾಟಕದ ಹೆಮ್ಮೆಯ ಸಂಸ್ಥೆ- ದಿನೇಶ್ ಗುಂಡೂರಾವ್

0
1

ಅತ್ಯಂತ ಕಡಿಮೆ ಶುಲ್ಕದಲ್ಲಿ ಮಕ್ಕಳು, ಜನರನ್ನು ಸಶಕ್ತಿಕರಣ ಗೊಳಿಸುವ ಶಿಸ್ತು, ಸಂಯಮ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆ ಯಾವುದೇ ಮಗು ಭಾರವಾಗದಂತೆ ಪರಿವರ್ತಿಸುತ್ತಿರುವುದು ದೇಶಕ್ಕೆ ಮಾದರಿಯಾಗಿದೆ. ಶಿಕ್ಷಣದೊಂದಿಗೆ ವ್ಯಕ್ತಿತ್ವ ವಿಕಸನ, ಸಾಂಸ್ಕೃತಿಕ ಪರಿಪೂರ್ಣತೆ ಇತ್ಯಾದಿಗಳನ್ನು ಕಲಿಸುತ್ತಿರುವ ಮೋಹನ್ ಆಳ್ವ ಪ್ರಾತ: ಸ್ಮರಣೀಯರಾಗಿದ್ದಾರೆ. ಶಿಕ್ಷಣವನ್ನು, ಸಂಸ್ಥೆಯನ್ನು ಉದ್ಯಮವನ್ನಾಗಿ ಕಟ್ಟದೆ ಆಸಕ್ತಿಯ ಮಜಲುಗಳನ್ನು ಮಕ್ಕಳ ಎದುರು ತೆರೆದಿಟ್ಟ ಮಹಾನ್ ವ್ಯಕ್ತಿ ಇಡೀ ಕರ್ನಾಟಕಕ್ಕೆ ಮಾದರಿಯಾಗಿದ್ದಾರೆ. ಇಂತಹ ಸಂಸ್ಥೆಯನ್ನು ಇನ್ನಷ್ಟು ಬೆಳೆಸಿ ಮುಂದುವರಿಸಬೇಕೆಂದು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ದ.ಕ. ಜಿಲ್ಲೆಯ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಆಶಿಸಿದರು.
ಅವರು ಆಗಸ್ಟ್ ಒಂದರಂದು ಆಳ್ವಾಸ್ ಪ್ರಗತಿ 2025 ನ್ನು ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಸಂಸ್ಥೆಯಲ್ಲಿ ದೀಪ ಬೆಳಗಿ ಉದ್ಘಾಟಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ ಎಲ್ ಧರ್ಮ ಮಾತನಾಡಿ ಇದು ಉದ್ಯೋಗ ಮೇಳಕ್ಕಿಂತ ಮುಖ್ಯವಾಗಿ ದೇಶಕ್ಕೆ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆ. ವಿದ್ಯಾರ್ಥಿಗಳು ಕಂಪೆನಿಯ ತಮ್ಮ ಬಳಿ ಬಂದು ಅವಕಾಶವನ್ನು ನೀಡುವ ಮಟ್ಟಿಗೆ ಕೌಶಲ್ಯದ ಶ್ರೇಷ್ಠತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಐದು ಜಗದ್ವಿಖ್ಯಾತ ಕಂಪನಿಗಳ ನೇತಾರರಾದ ಫಾರ್ಚುನರ್ ಕಂಪನಿಯ ವಕ್ವಾಡಿ ಪ್ರವೀಣ್ ಕುಮಾರ್, ರೋಹನ್ ಇಂಟರ್ನ್ಯಾಷನಲ್ ನ ಡಾ. ರೋಹನ್ ಮೊಂತೆರೊ, ಸೌದಿ ಅರೇಬಿಯಾದ ಕೆ ಎಸ್ ಶೇಟ್ ಕರ್ನಿರೆ, ಬಿಗ್ ಬ್ಯಾಗ್ಸ್ ನ ರವೀಶ್ ಕಾಮತ್, ನೀವಿಯತ್ ಸೊಲ್ಯೂಷನ್ಸ್ ನ ಸುಯೋಗ್ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಎ ಐ ಚಾಟ್ ಬೋಟ್ ಆಫ್ ನ್ನು
ಮಾಜಿ ಸಚಿವ ರಮಾನಾಥ ರೈ ಬಿಡುಗಡೆ ಮಾಡಿದರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು ಶುಭ ಹಾರೈಸಿದರು. ವೇದಿಕೆಯಲ್ಲಿ ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ರಿಜಿಸ್ಟ್ರಾರ್ ದೇವೇಂದ್ರಪ್ಪ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಅರಮನೆಯ ಕುಲದೀಪ್ ಎಂ, ಶ್ರೀಪತಿ ಭಟ್ ಹಾಗೂ ಇತರರು ಹಾಜರಿದ್ದರು.
ಡಾ. ಮೋಹನ್ ಆಳ್ವ ಸ್ವಾಗತಿಸಿದರು. ಪ್ರಿಯಾ ಸಿಕ್ವೇರಾ ಸನ್ಮಾನ ಪತ್ರ ವಾಚಿಸಿದರು. ಪ್ರೊ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here