ವರದಿ ರಾಯಿ ರಾಜ ಕುಮಾರ
ಅತ್ಯಂತ ಪ್ರಾಚೀನ ದೇವಾಲಯದ ಪುತ್ತಿಗೆ ಸೋಮನಾಥೇಶ್ವರ ಕ್ಷೇತ್ರದ ಪವಿತ್ರತೆ, ಶುದ್ಧತೆ, ಸ್ವಚ್ಛತೆ ಸದಾ ಸ್ಮರಣೀಯವಾದದು. ಇಂತಹ ಕ್ಷೇತ್ರದ ಭೇದಭಾವರಹಿತ ಆಶೀರ್ವಾದದಿಂದ ಅನಾರೋಗ್ಯವು ದೂರವಾಗಿ ಸಾಕಷ್ಟು ಬಲವನ್ನು ನನಗೆ ನೀಡಿರುತ್ತದೆ ಆದುದರಿಂದ ಕಿಂಚಿತ್ ಸಹಾಯ ಸಿ ಎಸ್ ಆರ್ ಗ್ರಾಂಟ್ ನಿಂದ ಒದಗಿಸಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅದಾನಿ ಸಮೂಹ ಸಂಸ್ಥೆಯ ಕಿಶೋರ್ ಆಳ್ವ ನೂತನವಾಗಿ ನಿರ್ಮಿಸಲಾದ ಅನ್ನ ಛತ್ರದ ಉದ್ಘಾಟನೆಯನ್ನು ದೀಪ ಬೆಳಗಿ ನೆರವೇರಿಸಿ ಶುಭ ಹಾರೈಸಿದರು.

ದೇವಾಲಯದ ಅನುವಂಶಿಕ ಮುಕ್ತೇಸರ, ಅರಮನೆಯ ಕುಲದೀಪ್ ಎಂ ಅವರು ಕಟ್ಟಡದ ರಚನೆಗೆ ಕಾರಣಕರ್ತರಾದ ಇಂಜಿನಿಯರ್ ರಾಧಾಕೃಷ್ಣ ಬೋರ್ಕರ್, ಮೇಸ್ತ್ರಿ ನಾರಾಯಣ, ಸೆಂಟ್ರಿಂಗ್ ರೋಹಿತ್, ಫ್ಯಾಬ್ರಿಕೇಷನ್ ಪ್ರಶಾಂತ, ಟೈಲ್ಸ್ ಸಂತೋಷ್ ಗೌಡ, ಪ್ಲಂಬಿಂಗ್ ಮತ್ತು ವೈರಿಂಗ್ ವಸಂತ ನಾಯಕ್ ಅವರುಗಳನ್ನು ಶಾಲುಹೊದಿಸಿ ಸ್ಮರಣಿಕೆ, ಫಲ ತಾಂಬೂಲಗಳನ್ನು ಇತ್ತು ಗೌರವಿಸಿದರು.
ವೇದಿಕೆಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್, ಕೆಎಂಎಫ್ ನ ಸುಚರಿತ ಶೆಟ್ಟಿ, ಎಂಸಿಎಸ್ ನ ಚಂದ್ರಶೇಖರ್, ದೇವಾಲಯದ ಅರ್ಚಕ ಅಡಿಗಳ್ ಅನಂತ ಕೃಷ್ಣ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಹಾಜರಿದ್ದರು. ನವೀನ್ ಅಂಬೂರಿ ಸ್ವಾಗತಿಸಿ ವಂದಿಸಿದರು.

