ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್ ನಲ್ಲಿ ಶ್ರೀ ಕಾಳಿಕಾಂಬ ಮಹಿಳಾ ಸಂಘ ಅಮಾಸೆಬೈಲು ಇವರು ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಮಹೋತ್ಸವವನ್ನು ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ರಾಮರಾಜ್ ಪೂರೋಹಿತ್ ಅಮಾಸೆಬೈಲು ಇವರ ಆಚಾರ್ಯತ್ವದಲ್ಲಿ ಅತ್ಯಂತ ಭಕ್ತಿ ಪೂರ್ವಕವಾಗಿ ನೆರವೇರಿಸಿದರು.
ನೆರೆದ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯೊಂದಿಗೆ ಪೂಜಾ ಪ್ರಸಾದವನ್ನು ನೀಡಲಾಯಿತು. ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳ ಜೊತೆಗೆ ಊರ ಮಹಿಳೆಯರು ಎಲ್ಲರೂ ಸೇರಿ ಪೂಜೆ ಮಾಡಿರುವುದು ವಿಶೇಷ.
ವರದಿ :- ಅರುಣ್ ಕುಂದ.