ಆತ್ಮನಿರ್ಭರ ಭಾರತಕ್ಕೆ ಅಮೆಜಾನ್ ಬೆಂಬಲ : 35 ಶತಕೋಟಿ ಡಾಲರ್ ಹೂಡಿಕೆಗೆ ನಿರ್ಧಾರ

0
41

ಮಂಗಳೂರು: ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಧ್ಯೇಯಕ್ಕೆ ಅಮೆಜಾನ್ ಶಕ್ತಿ ತುಂಬಲಿದ್ದು, ಭಾರತದಲ್ಲಿ2030ರ ವೇಳೆಗೆ 35 ಶತಕೋಟಿ ಡಾಲರ್ ಮೀರಿ ಹೂಡಿಕೆ ಮಾಡಲು ಅಮೆಜಾನ್ ನಿರ್ಧರಿಸಿದೆ.
ಕೀಸ್ಟೋನ್ ಸ್ಟ್ರಾಟಜಿ ಅಮೆಜಾನ್ ಸಂಭವ್ ಶೃಂಗಸಭೆಯ ಆರನೇ ಆವೃತ್ತಿಯ ಆರ್ಥಿಕ ಪರಿಣಾಮದ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಲಾಗಿದೆ. 2010ರಿಂದ ಅಮೆಜಾನ್ ಭಾರತದಲ್ಲಿ ಸುಮಾರು 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 12 ಮಿಲಿಯನ್ ಸಣ್ಣ ಉದ್ಯಮಗಳನ್ನು ಡಿಜಿಟಲೀಕರಣಗೊಳಿಸಿದೆ. 20 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಇ-ಕಾಮರ್ಸ್ ಮೂಲಕ ರಫ್ತು ಮಾಡಲು ಅನುಕೂಲ ಕಲ್ಪಿಸಿದೆ. ಸುಮಾರು 2.8 ಮಿಲಿಯನ್ ನೇರ, ಪರೋಕ್ಷ, ಪ್ರೇರಿತ ಮತ್ತು ಋತು ಆಧರಿತ ಉದ್ಯೋಗಗಳನ್ನು 2024ರಲ್ಲಿ ಬೆಂಬಲಿಸಿದೆ ಎಂದು ಅಮೆಜಾನ್ ಸೀನಿಯರ್ ವಿ.ಪಿ. ಎಮಜಿರ್ಂಗ್ ಮಾರ್ಕೆಟ್ಸ್ ಅಮಿತ್ ಅಗರ್ವಾಲ್ ವಿವರಿಸಿದರು.

ಅಮೆಜಾನ್ ಭಾರತದಲ್ಲಿ 2030 ರ ವೇಳೆಗೆ ತನ್ನ ಎಲ್ಲ ವಹಿವಾಟುಗಳಲ್ಲಿ 35 ಬಿಲಿಯನ್ ಡಾಲರ್ ಮೀರಿ ಹೂಡಿಕೆ ಮಾಡುವ ಯೋಜನೆ ಹೊಂದಿದ್ದು ಎಐ-ಪ್ರೇರಿತ ಡಿಜಿಟಲೀಕರಣ, ರಫ್ತು ಪ್ರಗತಿ ಮತ್ತು ಉದ್ಯೋಗಸೃಷ್ಟಿಯ ಮೂರು ಕಾರ್ಯತಂತ್ರೀಯ ಸ್ತಂಭಗಳಿಗೆ ಆದ್ಯತೆ ನೀಡಲಿದೆ. 2030ರ ವೇಳೆಗೆ ಅಮೆಜಾನ್ 3.8 ಮಿಲಿಯನ್ ಉದ್ಯೋಗಗಳಿಗೆ ಬೆಂಬಲಿಸಲಿದೆ ಎಂದು ವರದಿ ಹೇಳಿದೆ.
80 ಬಿಲಿಯನ್ ಡಾಲರ್ ಒಟ್ಟು ರಫ್ತು ಉತ್ತೇಜಿಸುವ, 15 ಮಿಲಿಯನ್ ಸಣ್ಣ ಉದ್ಯಮಗಳಿಗೆ, ನೂರಾರು ಮಿಲಿಯನ್ ಖರೀದಿದಾರರಿಗೆ ಎಐ ಅನುಕೂಲಗಳನ್ನು ಒದಗಿಸುವ ಮತ್ತು ಎಐ ಶಿಕ್ಷಣ ಮತ್ತು ಉದ್ಯೋಗದ ಅನ್ವೇಷಣೆಯ ಅವಕಾಶಗಳನ್ನು 4 ಮಿಲಿಯನ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಒದಗಿಸುವ ಗುರಿ ಹೊಂದಿದೆ. ಅಮೆಜಾನ್ ಭಾರತಕ್ಕೆ ತನ್ನ ಬದ್ಧತೆಯನ್ನು ಮರು ಶೃಂಗಸಭೆಯಲ್ಲಿ ದೃಢೀಕರಿಸಲಾಗಿದೆ.

LEAVE A REPLY

Please enter your comment!
Please enter your name here