ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ತ್ರಿಪುರ ಸುಂದರಿ ಬಲ್ಲಾಳ್ ಸರಸ್ವತೀ ಶಿಶುಮಂದಿರ ಅಂಬಲಪಾಡಿಯಲ್ಲಿ ಧರ್ಮದರ್ಶಿಯಾದ ಡಾ. ನಿ ಬೀ ವಿಜಯ ಬಲ್ಲಾಳರ ದಿವ್ಯ ಉಪಸ್ಥಿತಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ದಿನಕರ ಬಾಬುರವರು 79 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ನೆರವೇರಿಸಿದರು. ಧರ್ಮದರ್ಶಿಯವರು ಈ ಸಂಧರ್ಭ ಎಲ್ಲರಿಗೂ ಶುಭ ಹಾರೈಸಿದರು
ದಿನಕರ ಬಾಬುರವರು ಈ ಸಂದರ್ಭ ಉಚಿತ ಶಿಕ್ಷಣ ಉಚಿತ ಸಮವಸ್ತ್ರ ಉಚಿತ ಪುಸ್ತಕ ಬರವಣಿಗಾ ಸಾಮಗ್ರಿಗಳನ್ನು ನೀಡಿ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಧರ್ಮದರ್ಶಿಯವರನ್ನು ಶ್ಲಾಘಿಸಿದರು. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಗಾಗಿ ಭತ್ತದ ಬಿತ್ತನೆ ಮಾಡಿ ಕೃಷಿಯ ಪ್ರಾತ್ಯಕ್ಷಿಕೆಯನ್ನು ಮಕ್ಕಳಿಗೆ ತಿಳಿಸಿರುವ ಧರ್ಮದರ್ಶಿಯವರನ್ನು ಪ್ರಶಾಂಶಿಸಿದರು. ಹೀಗೆ ಶಿಕ್ಷಣದೊಂದಿಗೆ ಇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲು ಹೆತ್ತವರಿಗೆ ಕಿವಿ ಮಾತುಗಳನ್ನಾಡಿದರು. ಶಾಲಾ ಶಿಕ್ಷಕಿಯರಾದ ಕುಮಾರಿ ಶಾಲಿನಿ ಸ್ವಾಗತಿಸಿ, ಸೋನಿಯಾ ರವರು ವಂದಿಸಿದರು.
Devadas Kamath