ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ, ಅಂಬಲಪಾಡಿ ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ಆ.10ರಂದು ಸಂಘದ ಅಧ್ಯಕ್ಷರಾದ ಶಿವಕುಮಾರ್ ಅಂಬಲಪಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.
ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಂಘದ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ದಯಾನಂದ ಎ. ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು.
2025-27ನೇ ಸಾಲಿನ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರನ್ನು ಈ ಕೆಳಗಿನಂತೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶಿವದಾಸ್ ಪಿ. (ಅಧ್ಯಕ್ಷರು), ಗೋಪಾಲ್ ಸಿ. ಬಂಗೇರ (ಗೌರವಾಧ್ಯಕ್ಷರು), ಎ.ಮುದ್ದಣ್ಣ ಪೂಜಾರಿ (ಉಪಾಧ್ಯಕ್ಷರು), ರಾಜೇಶ್ (ಪ್ರಧಾನ ಕಾರ್ಯದರ್ಶಿ), ದಯಾನಂದ ಎ. (ಕೋಶಾಧಿಕಾರಿ), ಮಹೇಂದ್ರ ಕೋಟ್ಯಾನ್ ಮತ್ತು ವಿನಯ್ ಕುಮಾರ್ (ಜತೆ ಕಾರ್ಯದರ್ಶಿಗಳು), ಆಡಳಿತ ಸಮಿತಿ ಸದಸ್ಯರುಗಳಾಗಿ ಎ. ಶಿವಕುಮಾರ್ (ನಿಕಟಪೂರ್ವ ಅಧ್ಯಕ್ಷರು), ರಾಜೇಂದ್ರ ಪಂದುಬೆಟ್ಟು, ಸುಧಾಕರ್ ಎ., ರಮೇಶ್ ಕೋಟ್ಯಾನ್, ಗೋಧಾವರಿ ಎಮ್. ಸುವರ್ಣ, ಭಾಸ್ಕರ ಅಂಚನ್, ಕುಶಲ್ ಕುಮಾರ್ ಎ., ಸತೀಶ್ ಜಿ. ಪೂಜಾರಿ, ಗುರುರಾಜ್ ಪೂಜಾರಿ, ಲಕ್ಷ್ಮಣ ಪೂಜಾರಿ, ಅವಿನಾಶ್ ಪೂಜಾರಿ, ಭಾಸ್ಕರ ಕೋಟ್ಯಾನ್, ಚೆನ್ನಕೇಶವ, ಜನಾರ್ದನ ಪೂಜಾರಿ, ನಿತಿನ್ ಕುಮಾರ್ ಮತ್ತು ವಾಣಿಶ್ರೀ ಅರುಣ್.
ಗೌರವ ಭಜನಾ ಸಂಚಾಲಕರಾಗಿ ಕೆ.ಮಂಜಪ್ಪ ಸುವರ್ಣ, ಭಜನಾ ಸಂಚಾಲಕರಾಗಿ ಎ.ಶಿವಕುಮಾರ್, ಭಜನಾ ಸಹ ಸಂಚಾಲಕರಾಗಿ ಶಂಕರ ಪೂಜಾರಿ, ಅರ್ಚಕರಾಗಿ ಅವಿನಾಶ್ ಪೂಜಾರಿ, ಸಹ ಅರ್ಚಕರಾಗಿ ಜೀವನ್, ಅದಿತ್ ಮತ್ತು ಆಯುಷ್ ಹಾಗೂ ಗೌರವ ಲೆಕ್ಕ ಪರಿಶೋಧಕರಾಗಿ ಸಿ.ಎ. ಗಣೇಶ್ ಹೆಬ್ಬಾರ್ ಅಂಬಲಪಾಡಿ ಆಯ್ಕೆಯಾದರು.
ಆಡಳಿತ ಸಮಿತಿಯ ನೂತನ ಅಧ್ಯಕ್ಷ ಶಿವದಾಸ್ ಪಿ. ಮಾತನಾಡಿ, ಭಜನಾ ಸೇವೆಯ ಮೂಲಕ ಸಂಘಟನೆಯನ್ನು ಕಟ್ಟಿ ಬೆಳೆಸಿರುವ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಲು ಎಲ್ಲರ ಸಲಹೆ ಸೂಚನೆ, ಸಹಕಾರ ಅತೀ ಅಗತ್ಯ ಎಂದರು.
ಮಾಜಿ ಪ್ರಧಾನ ಕಾರ್ಯದರ್ಶಿ ಕುಶಲ್ ಕುಮಾರ್ ಎ. ಮತ್ತು ಆಡಳಿತ ಸಮಿತಿ ಸದಸ್ಯ ರಾಜೇಂದ್ರ ಪಂದುಬೆಟ್ಟು ಮಾತನಾಡಿ ಪ್ರಸಕ್ತ ಸಾಲಿನಲ್ಲಿ ‘ಶಾಶ್ವತ ಪಾತ್ರೆ ಪರಿಕರ’ ಖರೀದಿ ಯೋಜನೆ, ಭಜನಾ ಮಂದಿರದ ‘ಸಂಪರ್ಕ ರಸ್ತೆ ಅಭಿವೃದ್ಧಿ’, ಗರಿಷ್ಠ ಮೊತ್ತದ ‘ವಿದ್ಯಾರ್ಥಿ ವೇತನ’ ವಿತರಣೆ, ‘ಭಜನಾ ಮಂದಿರದ ನಿರ್ವಹಣೆ’ ಜೊತೆಗೆ ‘ಬ್ರಹ್ಮ ಕಲಶೋತ್ಸವ’ ಮುಂತಾದ ಉದಾತ್ತ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ಸಂಘದ ಆಡಳಿತ ಸಮಿತಿಯ ಕಾರ್ಯ ವೈಖರಿ ಪ್ರಶಂಸನೀಯ ಎಂದರು.
ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ, ಕಳೆದ 2 ವರ್ಷಗಳ ಅವಧಿಯಲ್ಲಿ ಆಡಳಿತ ಸಮಿತಿ, ಮಹಿಳಾ ಘಟಕ ಹಾಗೂ ಸಂಘದ ಸರ್ವ ಸದಸ್ಯರು ಮತ್ತು ಭಕ್ತಾಭಿಮಾನಿಗಳ ಸಂಪೂರ್ಣ ಸಹಕಾರದೊಂದಿಗೆ ಕೈಗೊಂಡಿರುವ ಸಂಘದ ಮತ್ತು ಭಜನಾ ಮಂದಿರದ ಅಭಿವೃದ್ಧಿ ಚಟುವಟಿಕೆಗಳು, ವಿಶೇಷ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳು ತೃಪ್ತಿ ತಂದಿದೆ. ಮುಂದೆಯೂ ಇನ್ನಷ್ಟು ಅಭಿವೃದ್ಧಿ ಕಾರ್ಯ ಚಟುವಟಿಕೆಗಳೊಂದಿಗೆ ಸಂಘದ ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಕಂಕಣಬದ್ದರಾಗಿ ಶ್ರಮಿಸೋಣ ಎಂದರು.
ಪ್ರಧಾನ ಕಾರ್ಯದರ್ಶಿ ರಾಜೇಶ್ ವಂದಿಸಿದರು. ಜನಗಣಮನದೊಂದಿಗೆ ಸಭೆಯು ಪೂರ್ಣ ವಿರಾಮಗೊಂಡಿತು.