ಹಾಲು ರಪ್ತಿಗೆ ಅಮೇರಿಕಾ ಉತ್ಸುಕ; ಮಾಂಸ ತಿನ್ನುವ ಹಸುವಿನ ಹಾಲಿಗೆ ಭಾರತ ತೀವ್ರ ವಿರೋಧ!

0
155

ನವದೆಹಲಿ: ಭಾರತದಲ್ಲಿ ಹೈನುಗಾರಿಗೆ ದೊಡ್ಡ ಉದ್ಯಮ. ಭಾರತದ ಹಳ್ಳಿಗಾಡಿನ ಜನರು ಹಸುಗಳನ್ನು ಜೀವನೋಪಾಯಕ್ಕಾಗಿ ಸಾಕುತ್ತಿದ್ದಾರೆ. ಇದೀಗ ಅಮೇರಿಕಾದಿಂದ ಹಾಲನ್ನ ಆಮದು ಮಾಡಿದ್ರೆ, ಹೈನುಗಾರಿಕೆಯನ್ನ ನಂಬಿರುವ ರೈತರಿಗೆ ಮೋಸವಾದಂತಾಗುತ್ತದೆ. ಭಾರತದಲ್ಲಿ ಹಸುವಿನ ಹಾಲಿಗೆ ಪಾವಿತ್ರ್ಯತೆ ಇದೆ. ಭಾರತದಲ್ಲಿ ಹಸುವನ್ನ ಗೋಮಾತೆ ಎಂದು ಪೂಜಿಸುತ್ತಾರೆ. ದೇವರ ನೈವೇದ್ಯಕ್ಕೂ ಹಸುವಿನ ಹಾಲು ಬೇಕು. ಆದರೆ ಭಾರತದಂತೆ ಅಮೇರಿಕಾದ ಹಸುಗಳು ಸಾದು ಹಸುಗಳಲ್ಲ. ಅಮೇರಿಕಾದ ಹಸುಗಳು ಮಾಂಸ ತಿನ್ನುವ, ರಕ್ತ ಕುಡಿಯುವ ಹಸುಗಳಾಗಿವೆ.

ಭಾರತಕ್ಕೆ ಅಮೇರಿಕಾ ಮಾಂಸ ತಿನ್ನುವ ಹಾಗೂ ರಕ್ತ ಕುಡಿಯುವ ಹಸುಗಳ ಹಾಲನ್ನ ರಪ್ತು ಮಾಡುತ್ತಿದೆ. ಮಾಂಸ ತಿನ್ನುವ ಹಸುವಿನ ಹಾಲಿನ ರಪ್ತಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಭಾರತ ಹಾಗೂ ಅಮೇರಿಕಾದ ವಾಣಿಜ್ಯ ಒಪ್ಪಂದ ತೀವ್ರ ಕಂಗಟ್ಟಾಗಿದೆ. ಸಾಮಾನ್ಯವಾಗಿ ಅಮೆರಿಕದಲ್ಲಿ ಹಸುಗಳಿಗೆ ಹಂದಿ, ಮೀನು, ಕೋಳಿ, ಕುದುರೆ, ಬೆಕ್ಕು, ನಾಯಿಗಳ ಭಾಗಗಳನ್ನೊಳಗೊಂಡ ಆಹಾರವನ್ನು ನೀಡಲಾಗುತ್ತದೆ. ಈ ಆಹಾರದ ಜೊತೆಯಲ್ಲಿ ಹಂದಿ ಮತ್ತು ಕುದುರೆಯ ರಕ್ತ, ಕೊಬ್ಬು ಮತ್ತು ಪ್ರೋಟೀನ್ ಸಹ ಅಮೇರಿಕಾದ ಹಸುಗಳಿಗೆ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಹಸುಗಳಿಗೆ ಈ ರೀತಿಯಾದ ಆಹಾರ ನೀಡಲ್ಲ. ಹಾಗಾಗಿ ಅಮೆರಿಕದ ಹಾಲನ್ನು ಮಾಂಸಾಹಾರಿ ಎಂದು ಕರೆಯಲಾಗುತ್ತಿದೆ.

Read more at: https://kannada.oneindia.com/news/india/what-is-non-veg-milk-why-it-s-the-bone-of-contention-in-the-india-us-trade-deal-420879.html?ref_source=OI-KN&ref_medium=Home-Page&ref_campaign=News-Cards

LEAVE A REPLY

Please enter your comment!
Please enter your name here