ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ನಿವೃತ್ತ ಮುಖ್ಯೋಪಾಧ್ಯಾಯರು ಖ್ಯಾತ ವಾಗ್ಮಿಯುೂ ಆಗಿರುವ ಮುನಿರಾಜ ರೆಂಜಾಳ ಅವರು ಮಾತನಾಡಿ, ಸಾಧನೆಗೆ ಪ್ರಯತ್ನ ಮತ್ತು ಅದೃಷ್ಟ ಇವೆರಡು ಮುಖ್ಯ ಸಂಗತಿಗಳು. ಪರಿಶ್ರಮ ಮೆಟ್ಟಿಲು ಇದ್ದಂತೆ, ಅದೃಷ್ಟ ಲಿಫ್ಟ್ ಇದ್ದಂತೆ. ಲಿಫ್ಟ್ ಕೈ ಕೊಡಬಹುದು ಆದರೆ ಪ್ರಯತ್ನ ಯಾವತ್ತೂ ಕೈ ಕೊಡುವುದಿಲ್ಲ. ಜೀವನದ ಕಷ್ಟ ಕಲಿಸಿದ ಪಾಠ ತರಗತಿಯಲ್ಲಿ ಸಿಗುವುದಿಲ್ಲ. ಅದನ್ನು ನಾವು ಜೀವನಾನುಭವದಿಂದಲೇ ಪಡೆದುಕೊಳ್ಳಬೇಕು. ಆದ್ದರಿಂದ ಗುರು ಹಿರಿಯರು ತಂದೆ ತಾಯಿಗಳು ಹೇಳಿದ ಮಾತುಗಳನ್ನು ಯಾವಾಗಲೂ ನಿಷ್ಠೆಯಿಂದ ಕೇಳಬೇಕು ಎಂದರು. ವಿಶ್ವಸ್ಥರಾದ ವಿಷ್ಣುಮೂರ್ತಿ ನಾಯಕ್ ರವರು ಸ್ಮರಣಿಕೆ ನೀಡಿ ಗೌರವಿಸಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ ನಾಯಕ್, ಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕರಾದ ವೀಣೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.