ಅಮೃತ ಭಾರತಿ : ಎನ್ ಸಿ ಸಿ ಪ್ರಮಾಣ ಪತ್ರ ವಿತರಣೆ

0
65

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎನ್ ಸಿ ಸಿ ಘಟಕದ ವಿದ್ಯಾರ್ಥಿಗಳಿಗೆ ಎ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಫೆಬ್ರವರಿ ತಿಂಗಳಲ್ಲಿ ಉಡುಪಿಯ ಪಿಪಿಸಿ ವಿದ್ಯಾಸಂಸ್ಥೆಯಲ್ಲಿ ನಡೆದ ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆಯನ್ನು ಎದುರಿಸಿದ 17 ಮಂದಿ ಹುಡುಗರು ಹಾಗೂ ಏಳು ಮಂದಿ ಹುಡುಗಿಯರ ಸಹಿತ 24 ಮಂದಿ ಎನ್‌.ಸಿ.ಸಿ. ಆರ್ಮಿ ‘ಎ’ ಸರ್ಟಿಫಿಕೇಟ್ ಗೆ ಅರ್ಹತೆ ಪಡೆದುಕೊಂಡರು. ಇವರಿಗೆ ಪಿ ಐ ಸಿಬ್ಬಂದಿಗಳಾದ ನೈಬ್ ಸುಬೇದಾರ್ ಓನ್ಕಾರ್, ಹವಾಲ್ದಾರ್ ಗುರಿಂದರ್ ಸಿಂಗ್ ಪ್ರಮಾಣ ಪತ್ರ ವಿತರಿಸಿದರು. ಸಿಬಿಎಸ್ಇ ವಿಭಾಗದ ಪ್ರಾಂಶುಪಾಲ ರಾದ ಅರುಣ್ ಎಚ್. ವೈ., ಮುಖ್ಯೋಪಾಧ್ಯಾಯನಿ ಅಪರ್ಣಾ ಆಚಾರ್, ಎಎನ್ಓ ಚಿತ್ತರಂಜನ್ ನಾಯ್ಕ ಉಪಸ್ಥಿತರಿದ್ದರು. ಮುಂದಿನ ಶೈಕ್ಷಣಿಕ ವರ್ಷಕ್ಕೆ 25 ವಿದ್ಯಾರ್ಥಿಗಳನ್ನು ನೋಂದಾಯಿಸಲಾಯಿತು. ಕೆಡೆಟ್ ಶ್ರೀಗೌರಿ ನಿರೂಪಿಸಿ , ಕೆಡೆಟ್ ಇಷಾನ್ವಿ ವಂದಿಸಿದರು.

LEAVE A REPLY

Please enter your comment!
Please enter your name here