ಅಮೃತ ಭಾರತಿ : ಫೌಂಡೇಶನ್ ತರಗತಿ ಉದ್ಘಾಟನೆ

0
20


ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಫೌಂಡೇಶನ್ ತರಗತಿಗಳ ಉದ್ಘಾಟನೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು . ಸರಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ದಿವಾಕರ ಮರಕಾಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆ ಇತ್ತು. ಇಂದು ಆ ಸನ್ನಿವೇಶ ಇಲ್ಲ. ಆದರೆ ಪ್ರತೀ ಕ್ಷೇತ್ರದಲ್ಲೂ ಕಠಿಣ ಸ್ಪರ್ಧೆ ಇದೆ . ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಷ್ಟು ತಯಾರಿ ನಡೆಸಿದರೂ ಕಡಿಮೆ. ಆ ನಿಟ್ಟಿನಲ್ಲಿ ಅಮೃತ ಭಾರತಿ ಪ್ರೌಢಶಾಲಾ ಹಂತದಲ್ಲೇ ಸಿಇಟಿ, ನೀಟ್ , ಜೆ ಇ ಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಫೌಂಡೇಶನ್ ತರಗತಿ ಆರಂಭಿಸುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಮೃತ ಭಾರತಿ
ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಸತೀಶ್ ಪೈ ಯವರು ಮಾತನಾಡಿ , ಒಂದು ಕಟ್ಟಡ ಬಲವಾಗಿ ನಿಲ್ಲಬೇಕಾದರೆ ಅದರ ಅಡಿಪಾಯ ಗಟ್ಟಿಯಾಗಿರಬೇಕು. ಆಗ ಅದರ ಮೇಲೆ ಎಷ್ಟು ಅಂತಸ್ತುಗಳನ್ನು ಬೇಕಾದರೂ ಕಟ್ಟಬಹುದು . ಹಾಗೆಯೇ ನಮ್ಮ ವಿದ್ಯಾರ್ಥಿಗಳ ಜ್ಞಾನದ ಅಡಿಪಾಯ ಕೂಡ ಗಟ್ಟಿ ಯಾಗಬೇಕು . ಆ ನೆಲೆಯಲ್ಲಿ ಫೌಂಡೇಶನ್ ತರಗತಿ ಆರಂಭಿಸುತ್ತಿದ್ದೇವೆ . ಇದು ಸರ್ಕಾರಿ ಶಾಲೆಯಲ್ಲಿಯೂ ಕೂಡ ಆಗಬೇಕು. ಅಮೃತ ಭಾರತಿ ಟ್ರಸ್ಟ್ ನ ಹೆಚ್ಚಿನ ಎಲ್ಲಾ ಸದಸ್ಯರು ಹೆಬ್ರಿ ಸರ್ಕಾರಿ ಶಾಲೆಯಲ್ಲಿಯೇ ಕಲಿತಿರುವುದರಿಂದ , ಅಲ್ಲಿ ಫೌಂಡೇಶನ್ ತರಗತಿ ಆರಂಭಿಸುವುದಾದರೆ ಅಮೃತ ಭಾರತಿ ಟ್ರಸ್ಟ್ ಅದರ ವೆಚ್ಚವನ್ನು ಬರಿಸುವುದರ ಜೊತೆಗೆ , ಎಲ್ಲ ರೀತಿಯ ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗುರುದಾಸ್ ಶೆಣೈ ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುವುದು ಅಮೃತ ಭಾರತಿ ಯ ದ್ಯೇಯ . ಉತ್ತಮ ಉಪನ್ಯಾಸಕರ ಲಭ್ಯತೆಯೊಂದಿಗೆ ಈ ತರಗತಿ ಆರಂಭಿಸುತ್ತಿದ್ದು ವಿದ್ಯಾರ್ಥಿಗಳು ಗಂಭೀರವಾಗಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕಾಲೇಜು ಪ್ರಾಂಶುಪಾಲ ಪ್ರಕಾಶ್ ಜೋಗಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ ನಾಯಕ್, ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ , ವಿದ್ಯಾಕೇಂದ್ರ ದ ಪ್ರಾಂಶುಪಾಲರಾದ ಅರುಣ್ ಏಚ್. ವೈ. , ಮುಖ್ಯೋಪಾದ್ಯಾಯಿನಿ ಅನಿತಾ , ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಅಪರ್ಣಾ ಆಚಾರ್ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here