ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೆಬ್ರಿ ಶಾಖೆಯ ಸಿಬ್ಬಂದಿಯವರೊಂದಿಗೆ ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ವ್ಯವಸ್ಥಾ ಪ್ರಮುಖ್ ಶ್ರೀಯುತ ಸುಧೀರ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ , ರಕ್ಷಾಬಂಧನ ಅಣ್ಣ ತಂಗಿಯರ ಮಧುರ ಬಾಂಧವ್ಯದ ಸಂಕೇತ. ತಂಗಿ ತನ್ನ ಅಣ್ಣನಿಗೆ ರಾಕಿ ಕಟ್ಟಿ ತನ್ನ ರಕ್ಷಣೆಯನ್ನು ಕೋರುತ್ತಾಳೆ .ಅಣ್ಣ ಅವಳ ರಕ್ಷಣೆಯನ್ನು ಮಾಡುವ ಭರವಸೆಯನ್ನು ನೀಡುತ್ತಾನೆ. ಅದೇ ರೀತಿ ನಾವೆಲ್ಲರೂ ದೇಶದ ರಕ್ಷಣೆಯನ್ನು ಮಾಡುವ ಸಂಕಲ್ಪವನ್ನು ತೊಡಬೇಕು ಎಂದರು. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಹೆಬ್ರಿ ಶಾಖೆಯ ಹಿರಿಯ ಸಿಬ್ಬಂದಿಯಾಗಿರುವ ಅಪ್ಪಣ್ಣ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಅವರು ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಗಣ್ಯರು ಹಾಗೂ ವಿದ್ಯುತ್ ಸರಬರಾಜು ಕಂಪನಿಯ ಸಿಬ್ಬಂದಿಯವರಿಗೆ (ಲೈನ್ ಮ್ಯಾನ್) ರಾಖಿ ಕಟ್ಟಿ ಆರತಿ ಬೆಳಗಿ ಸಿಹಿ ಹಂಚಲಾಯಿತು. ವಿದ್ಯಾರ್ಥಿಗಳು ಪರಸ್ಪರ ರಾಕಿಗಳನ್ನು ಕಟ್ಟಿಕೊಂಡು ಪ್ರೀತಿಯ ಬಾಂಧವ್ಯವನ್ನು ಪರಸ್ಪರ ಹಂಚಿಕೊಂಡರು. ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿ ಸ್ವಸ್ತಿ ಕಿಣಿ ನಿರೂಪಿಸಿ, ಸಿದ್ದಮ್ಮ ವಂದಿಸಿದರು.