ಅಮ್ಟೂರ್ ಹೃದಯ ಭಾಗದಲ್ಲಿ ಅಶ್ವತ್ಥ ಕಟ್ಟೆಯಲ್ಲಿ ವರ್ಷಂ ಪ್ರತಿ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಮೂರ್ತಿ ಪೂಜೆಗೊಳ್ಳುವ ಧಾರ್ಮಿಕ ಹಿನ್ನಲೆ ಹೊಂದಿರುವ ಅಶ್ವತ್ಥ ಕಟ್ಟೆ ನವೀಕರಣ ವಾಸ್ತು ಪ್ರಕಾರ ಆಯವತ್ತವಾಗಿ ಪುನರ್ ನಿರ್ಮಾಣ ಮಾಡಲು ಶಿಲಾನ್ಯಾಸ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನವನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ನೆರವೇರಿಸಿದರು.
ಮೋಹನ ರಾಜ ಚೌಟ ಪುoಜಲ್ ಮಾರ್ ಗುತ್ತು, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ರತ್ನಾಕರ ಪಡೀಲ್, .ಸಂಜೀವ ಪೂಜಾರಿ ಅಮ್ಟೂರು, ಕೃಷ್ಣಪ್ಪ ಕುಬಾಲ್, ಶರತ್ ಕುಮಾರ್, ವೇಣುಗೋಪಾಲ, ಹರೀಶ, ಅನಿಲ್, ಸುಂದರ ಶಾಂತಿ ಪಾಲಿ ಕೆ., ಕೃಷ್ಣಪ್ಪ ಆಚಾರ್ಯ, ಮೋನಪ್ಪ ಆಚಾರ್ಯ, ಕುoಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ, ಧನಂಜಯ ರೈ, ಮಹಾಬಲ ಸಾಲಿಯಾನ್ ಮುಳಿ ಕೊಡಂಗೇ, ಮೊದಲಾದವರು ಉಪಸ್ಥಿತರಿದ್ದರು.