ಉಡುಪಿ: ದುರ್ಬಲರಿಗೆ ಸಹಾಯ ಹಸ್ತ, ಕೃಷಿಕರಿಗೆ ಸೌಕರ್ಯ, ಉದ್ಯಮಶೀಲರಿಗೆ ಒತ್ತಾಸೆ, ಸಾಮಾಜಿಕ ಸೌಹಾರ್ದದ ವಾತಾವರಣ ಅಭಿವೃದ್ಧಿಯ ಬುನಾದಿ ಎಂಬ ವಿಶ್ವಾಸದೊಂದಿಗೆ ಹತ್ತು ಹಲವು ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳಕರ್ ಹೇಳಿದ್ದಾರೆ.
ಅಜ್ಜರಕಾಡು ಮೈದಾನದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಉನ್ನತ ಪ್ರಜಾಪ್ರಭುತ್ವದ ಆಶಯದ ನಮ್ಮ ಸಂವಿಧಾನ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ, ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಲಿಂಗ, ಭಾಷೆೆ, ಧರ್ಮ, ಜನಾಂಗ, ಜನ್ಮಸ್ಥಳ ಯಾವುದೇ ಬೇಧ ಭಾವವಿಲ್ಲದೇ ಸಮಾನ ಅವಕಾಶ ನೀಡಲಾಗಿದೆ. ಪ್ರತಿಯೊಬ್ಬ ನಾಗರಿಕರ ಘನತೆ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಸದಾ ಋಣಿಗಳಾಗಿರಬೇಕು ಎಂದರು.
ದೇಶದ ನಾಗರಿಕರಾಗಿ ಭವ್ಯ ಪರಂಪರೆ, ಸಂಸತಿ ಇವುಗಳನ್ನು ಉಳಿಸಿ -ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಭಾಷೆೆ, ಪಂಗಡ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ಸೃಷ್ಟಿಸಿ, ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡುವುದರೊಂದಿಗೆ ದೃಢ ರಾಷ್ಟ್ರನಿಮಾರ್ಣದ ಸಂಕಲ್ಪವನ್ನು ಮಾಡಬೇಕು. ಪ್ರಾಮಾಣಿಕತೆ, ಉತ್ತಮ ನಡವಳಿಕೆ ಹಾಗೂ ಮೌಲ್ಯಗಳು ಮಹತ್ವವಾದುದು. ನಮ್ಮ ದೇಶದ ಯುವ ಜನರು ಈ ಪರಂಪರೆಯನ್ನು ಮುನ್ನಡೆಸಿಕೊಂಡು, ಮೌಲ್ಯಾಧಾರಿತ ಶಿಕ್ಷಣವನ್ನು ಹೊಂದಿ, ದೇಶದ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಕರೆ ನೀಡಿದರು.
ದ್ವೇಷ ಭಾಷಣದ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿ, ಆ ಮೂಲಕ ಅಮಾಯಕ ಜನರ ಜೀವಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟು ಮಾಡುತ್ತಿದ್ದು, ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ದ್ವೇಷ ಭಾಷಣ ತಡೆ ಮತ್ತು ದ್ವೇಷ ಅಪರಾಧಿಗಳ ಪ್ರತಿಬಂಧಕ ವಿಧೇಯಕವನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದರು.

ಕೃಷಿಕರಿಗೆ ಸನ್ಮಾನ–
ಕೃಷಿ ಇಲಾಖೆಯ ವತಿಯಿಂದ 2025&-26 ನೇ ಸಾಲಿನ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ರೈತರಾದ ಸುಮಾ, ಗುಲಾಬಿ, ಸೀತಾರಾಮ ಪೂಜಾರಿ, ರಾಜೀವಿ ನಾಯ್ಕ, ರೇವತಿ ಭಟ್, ಜೋಧಾ ಶೆಟ್ಟಿ, ಸುಚಿತ್ರಾ, ಸೀತು, ಅಣ್ಣಿ ಪರವ ಮತ್ತು ಸುಮತಿ ನಾಯಕ್ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಮಮತಾ ಪಿ.ಶೆಟ್ಟಿ, ವಸಂತಿ ಕರ್ಕೇರ, ಶ್ರೀನಿವಾಸ ರಾವ್, ಶಕೀಲ ಶೆಟ್ಟಿ ಹಾಗೂ ಭಾವನಾ ಭಟ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿಗೆ ಆಯ್ಕೆಯಾದ ಕೆದೂರಿನ ಕರುಣಾಕರ ಶೆಟ್ಟಿ ಮತ್ತು ಪಾದೂರಿನ ನಿತ್ಯಾನಂದ ನಾಯಕ್ ಹಾಗೂ ನೀಲಾವರದ ಲಲಿತಾ ಶೆಟ್ಟಿ, ಗುಲ್ವಾಡಿ ನಾಗರತ್ನ ಪೂಜಾರಿ ಹಾಗೂ ಮಠದಬೆಟ್ಟು ಲಕ್ಷಿ$್ಮ ಇವರನ್ನು ಸನ್ಮಾನಿಸಲಾಯಿತು.
50 ಸಾವಿರ ರೂ. ನಗದು ಪುರಸ್ಕಾರ–
2024&-25 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಎಸ್. ಶ್ರೀ ರಾಮ್ ಶೆಟ್ಟಿ (625 ಅಂಕ), ತೃಪ್ತಿ (623 ಅಂಕ), ನೂರ್ ಮಾಝಿನ್ (622 ಅಂಕ) ಹಾಗೂ ಸೃಷ್ಟಿ ಆಚಾರ್ (622 ಅಂಕ) ಅವರಿಗೆ 50 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಅಂಕಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಜಯದೀಪ್ ಪೂಜಾರಿ (621 ಅಂಕ), ಪ್ರಿಯಾ (620 ಅಂಕ) ಹಾಗೂ ಅನನ್ಯ (619 ಅಂಕ) ಅವರನ್ನು ಸನ್ಮಾನಿಸಲಾಯಿತು.
ಪಥಸಂಚಲನ ವಿಜೇತರು–
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಪಥ ಸಂಚಲನ ನಡೆಸಿದ ಪೂರ್ಣಪ್ರಜ್ಞ ಕಾಲೇಜಿನ ಎನ್.ಸಿ.ಸಿ ಆರ್ಮಿ ವಿಭಾಗ ಪ್ರಥಮ, ಕುಂಜಿಬೆಟ್ಟು ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ದ್ವೀತಿಯ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಎನ್.ಸಿ.ಸಿ ನೇವಿ ವಿಭಾಗ ತೃತೀಯ ಸ್ಥಾನ ಪಡೆಯಿತು. ಪ್ರೌಢ ಶಾಲಾ ವಿಭಾಗದಲ್ಲಿ ಒಳಕಾಡು ಸರ್ಕಾರಿ ಪ್ರೌಢಶಾಲೆ ಹಾಗೂ ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿ ಪ್ರಥಮ, ಕಡಿಯಾಳಿ ಯು. ಕಮಲಾಭಾಯಿ ಪ್ರೌಢಶಾಲೆ ದ್ವೀತಿಯ ಹಾಗೂ ಮಾಧವಕೃಪ ಹೈಸ್ಕೂಲ್ ತೃತೀಯ ಸ್ಥಾನ ಪಡೆಯಿತು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಂತೆಕಟ್ಟೆ ಕಳತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಹಾಗೂ ಒಳಕಾಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದ್ವೀತಿಯ ಸ್ಥಾನ ಪಡೆಯಿತು.
ನೃತ್ಯ ಪ್ರದರ್ಶನ–
ದೇಶಭಕ್ತಿ ಕುರಿತಾದ ನೃತ್ಯ ಪ್ರದರ್ಶನ ನೀಡಿದ ತಂಡದಲ್ಲಿ ಒಳಕಾಡು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ, ಉಡುಪಿ ಪಣಿಯಾಡಿ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ದ್ವೀತಿಯ, ಉಡುಪಿಯ ಶ್ರೀ ಮುಕುಂದ ಕೃಪಾ ಆಂಗ್ಲಮಾಧ್ಯಮ ಶಾಲೆ ತೃತೀಯ ಸ್ಥಾನ ಹಾಗೂ ಉದ್ಯಾವರ ಸೈಂಟ್ ಕ್ಲೇವಿಯರ್ ಆಂಗ್ಲಮಾಧ್ಯಮ ಶಾಲೆ ಸಮಾಧಾನಕರ ಬಹುಮಾನ ಪಡೆಯಿತು.

