ವೇಣೂರು: ಬೆಳ್ತಂಗಡಿ ತಾಲೂಕಿನ ಅಂಡಿಂಜೆಯಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ರಾಜ್ಯದ ಗಮನ ಸೆಳೆದಿದೆ. ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆಯ ನಡುವೆಯೇ ಮಹಿಳೆಯರು, ಯುವತಿಯರು, ಮಕ್ಕಳು ನೃತ್ಯ ಮಾಡುತ್ತಾ ಭಜನೆ ಮಾಡಿ ಗಮನ ಸೆಳೆದಿದ್ದಾರೆ. ರಾಜ್ಯದ ನ್ಯೂಸ್ ಚಾನೆಲ್ ಗಳಲ್ಲೂ ವೀಡಿಯೋ ವೈರಲ್ ಆಗಿದೆ. ಅದ್ದೂರಿಯಾಗಿ ನಡೆದ ಗಣೇಶೋತ್ಸವವು ವಿವಿಧ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ವರದಿ: ಪದ್ಮನಾಭ ವೇಣೂರು