ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ;ಸಹಸ್ರ ನಾಲಿಕೇರ ಗಣಯಾಗ, ಮಹಾಪೂಜೆ

0
33

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಸಹಸ್ರ ನಾಲಿಕೇರ ಗಣಯಾಗ, ಮಹಾಪೂಜೆ ನಂತರ ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ , ಸುವರ್ಣ ಪಲ್ಲಕ್ಕಿ ಉತ್ಸವ , ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಭಜನಾ ಮಂಡಳಿ, ಬೀಜಾಡಿ ಗೋಪಾಡಿ,ಮಹಿಳಾ ಸದಸ್ಯರಿಂದ ಕುಣಿತ ಭಜನೆ , ನಂತರ ಸರಿಗಮಪ ಜರಗಿತು.
ವಿಶ್ವತಾ ಭಟ್ ಉಡುಪಿ, ಇವರಿಂದ ದಾಸಸಾಹಿತ್ಯ ಭಕ್ತಿ ಸಂಗೀತದೊಂದಿಗೆ ಸಂಪನ್ನಗೊಂಡಿತು , ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಶ್ರೀ ದೇವರ ದರ್ಶನ ಪಡೆದುಕೊಂಡರು,
ಶ್ರೀ ದೇವರ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ , ಪರ್ಯಾಯ ಅರ್ಚಕರಾದ ವ್ಯಾಸ ಉಪಾಧ್ಯಾಯ ಸಹೋದರರು , ಅರ್ಚಕ ಸಿಬ್ಬಂದಿ, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here