ಕಲ್ಲಡ್ಕ : ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಊರ ಹಿರಿಯರಾದ ರಾಮಚಂದ್ರ ಬನ್ನಿಂತ್ತಾಯ ಚನಿಲ ನೆಟ್ಲ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ವತಿಯಿಂದ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಅಧ್ಯಕ್ಷರಾದ ರೊ.ದಿವಾಕರ ಶೆಟ್ಟಿ, ಝೋನ್ 4 ರ ಆಸಿಸ್ಟೆಂಟ್ ಗವರ್ನರ್ ರೊ.ಪದ್ಮನಾಭ ರೈ, ನಿಕಟಪೂರ್ವ ಅಧ್ಯಕ್ಷರಾದ ರೊ.ಶೇಸಪ್ಪ ಮೂಲ್ಯ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಭಾಸ್ಕರ್ ಕುಲಾಲ್, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶಿಕ್ಷಕಿ ಸಂಗೀತ ಶರ್ಮ, ಗ್ರಾಮ ಪಂಚಾಯತ್ ಸದಸ್ಯರಾದ ಹರಿಣಾಕ್ಷಿ, ಶಾಲಾ ಮುಖ್ಯ ಶಿಕ್ಷಕಿ ಶೋಭತಾ ಬಿ., ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಭವ್ಯ, ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿಯ ಸದಸ್ಯರಾದ ರೊ. ವಿದ್ಯಾಧರ್, ರೊ.ಸುಂದರ ಬಂಗೇರ,,ರೊ.ಸದಾಶಿವ ಬೊಂಡಾಲ, ರೊ.ರಮೇಶ್,, ರೊ.ಸುಪ್ರಿಯರಮೇಶ್,,ಉಪಸ್ಥಿತರಿದ್ದರು.
ಸಾಯಂಕಾಲ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಕ್ಕಳ ನಾಟಕ ಜರಗಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾವಾದಿ ಶಾಲಾ ಹಿರಿಯ ವಿದ್ಯಾರ್ಥಿ ಪ್ರವೀಣ್ ಕುಮಾರ್ ಮುಗುಳಿ, ಶಾಮಿಯಾನ ಮಾಲಕರ ಸಂಘ ಬಂಟ್ವಾಳ ಇದರ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಮಲ್ಕಾರ್ ಉದ್ಯಮಿ, ರೊ.ನಾರಾಯಣ ಸಿ ಪೆರ್ನೆ . ಜೆ. ಎಸ್ ಪೈಂಟಿಂಗ್ ಕಾಂಟ್ರಾಕ್ಟರ್ ಜಗದೀಶ್ ಬಜ್ಜಾರ್ , ಗೋಳ್ತಮಜಲು ಗ್ರಾಮಪಂಚಾಯತ್ ಅಧ್ಯಕ್ಷ ರಾದ ಪ್ರೇಮಾ, ಗ್ರಾಮ ಪಂಚಾಯತ್ ಸದಸ್ಯರಾದ ಅಭಿಷೇಕ್, ದೀಪಕ್ ಸವಿತಾ ಹಾಗೂ ಹರಿಣಾಕ್ಷಿ,ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಹಿರಿಯ ವಿದ್ಯಾರ್ಥಿಗಳಾದ ನವೀನ್ ಕುಮಾರ್ ಶೆಟ್ಟಿ ಚನಿಲ, ಶ್ಯಾಮಲ ಕೆ ಕೆ ನಾಯ್ಕ ನೆಟ್ಲ ಮುಂಡಾಜೆ , ನವೀನ್ ಗಟ್ಟಿ ನೆಟ್ಲ ಉಪಸ್ಥಿತರಿದ್ದರು .
ಮುಖ್ಯ ಶಿಕ್ಷಕಿ ಶೋಭಲತ ಬಿ ಸ್ವಾಗತಿಸಿ, ಸಹ ಶಿಕ್ಷಕ ಪ್ರವೀಣ್ ವಂದಿಸಿದರು. ಮನೋಜ್ ಗಟ್ಟಿ ಮತ್ತು ಮೋಹನ್ ಕುಮಾರ್ ನೆಟ್ಲ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ನಿಶ್ಮಿತಾ,ಸುಮನಾ ಮಂಚಿ ಅಶ್ವಿನಿ, ಮಹಮ್ಮದ್ ಅಖೀಲ್, ಇಂದಿರಾ, ಜಯರಾಮ್ ನಾವಡ ಸಹಕರಿಸಿದರು.
ನಂತರ ಶಾಲಾ ಮಕ್ಕಳಿಂದ ‘ ಮಿನುಗುವ ನಕ್ಷತ್ರ ‘ನಾಟಕ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವ ದಿಂದ ಶಾರದಾ ಕಲಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸಿದ ‘ಕಥೆ ಎಡ್ಡೆಂಡು’ ನಾಟಕ ಪ್ರದರ್ಶನಗೊಂಡಿತು.

