ಹೆಬ್ರಿ : ಮುದ್ರಾಡಿ ಸುಬ್ಬಣ್ಣ ಕಟ್ಟೆ ಸೇವಾ ಸಂಗಮ ಶಿಶುಮಂದಿರದ ರಜತ ಮಹೋತ್ಸವ ಸಮಿತಿಯಿಂದ ವಿಜ್ಞಾಪನಾ ಪತ್ರ ಬಿಡುಗಡೆಯು ಮುದ್ರಾಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜ.31 ರಂದು ನಡೆಯಿತು.
ಕಾರ್ಕಳ ತಾಲೂಕಿನ, ಹೆಬ್ರಿ ಭಾಗದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಶಿಶುಮಂದಿರವೆಂಬ ಹೆಗ್ಗಳಿಕೆಯನ್ನು ಹೊಂದಿರುವ ಈ ವಿದ್ಯಾಮಂದಿರವು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳಿಂದ ಪ್ರೇರಿತವಾಗಿ ಬಾಲ್ಯದಲ್ಲೇ ಸಂಸ್ಕಾರ ಎಂಬ ತತ್ವವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಶಿಶುಮಂದಿರಕ್ಕೆ 25 ವರ್ಷ ಪೂರೈಸಿದ ಸವಿ ನೆನೆಪಿಗಾಗಿ ರಜತಮಹೋತ್ಸವ ಆಚರಿಸಬೇಕೆಂಬ ಸಂಕಲ್ಪ ದೊಂದಿಗೆ ಪುಟಾಣಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಚಿಂತನೆ ಮಾಡಿಕೊಂಡು ಸರ್ವರಿಂದಲೂ ಸರ್ವ ವಿಧದ ಸಹಕಾರಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು.
ಗೌರವಾಧ್ಯಕ್ಷರಾದ ವಿದ್ವಾನ್ ಪದ್ಮನಾಭ ಆಚಾರ್ಯ ವಿಜ್ಞಾನ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಶಿಶು ಮಂದಿರದ ವ್ಯವಸ್ಥಾಪಕರ ಸಂಕಲ್ಪದಂತೆ ಶಿಶುಮಂದಿರದ ಬೆಳವಣಿಗೆಗಾಗಿ, ಸಂಸ್ಕಾರಯುತ ಪೀಳಿಗೆಯ ನಿರ್ಮಾಣಕ್ಕಾಗಿ ಎಲ್ಲರ ಸಹಕಾರವು ಹರಿದು ಬರಲಿ ಎಂದ ಅವರು ದೇವರಲ್ಲಿ ಪ್ರಾರ್ಥಿಸಿದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀಧರ್ ಹೆಬ್ಬಾರ್ ಕಾಪೋಳಿ,ಶಿಶುಮಂದಿರ ವ್ಯವಸ್ಥಾಪಕರಾದ ಶ್ರೀಧರ್ ನಾಯಕ್, ಮುದ್ರಾಡಿ ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಗಣಪತಿ.ಎಂ ಮಾತನಾಡಿ ಎಲ್ಲರೂ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ಸಹಕರಿಸಲು ವಿನಂತಿಸಿಕೊಂಡರು.
ಶಿಶು ಮಂದಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ವ್ಯವಸ್ಥಾಪಕಿ ಶಿಲ್ಪಾ ಶ್ರೀಧರ್ ನಾಯಕ್, ಸಂತೋಷ ಕುಮಾರ್ ಶೆಟ್ಟಿ,ಉಮೇಶ್ ಪೈ, ಗುರುಪ್ರಸಾದ್ ಕೊಳಂಬೆ, ಶ್ರೀಧರ ಪೂಜಾರಿ, ಉಷಾ ಪೈ, ಅರುಣ ರಾವ್ ನೆಲ್ಲಿಕಟ್ಟೆ, ರವಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ನಿರೂಪಿಸಿದರು, ಶ್ರೀಧರ್ ನಾಯಕ್ ಪ್ರಸ್ತಾಪಿಸಿ ವಂದಿಸಿದರು.

