ಬಜಪೆ : ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನದ ವರ್ಷಾವಧಿ ಜಾತ್ರೆ , ನೇಮೋತ್ಸವ ಶುಕ್ರವಾರದಂದು ಧಾರ್ಮಿಕ , ಸಾಂಪ್ರದಾಯಿಕ ವಿಧಿಗಳೊಂದಿಗೆ ಪ್ರಾರಂಭಗೊಂಡಿತು.

ಬೆಳಿಗ್ಗೆ ಉಳ್ಳಾಯ ದೈವದ ನೇಮ , ಕಂಚಿಲು ಸೇವೆ , ಉರುಳು ಸೇವೆ , ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಮುಂಜಾನೆ ಮುಕ್ಕೋಟಿ ದ್ವಾದಶಿ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿತು. ರಾತ್ರಿ ಶ್ರೀ ಕೊಡಮಂತ್ತಾಯ ದೈವದ ನೇಮ ಜರುಗಲಿದೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಎಕ್ಕಾರು ಶ್ರೀ ಕೊಡಮಂತ್ತಾಯ ದೈವಸ್ಥಾನಕ್ಕೆ ( ದೇರಿಂಜೆಗಿರಿ) ಭೇಟಿ ನೀಡಿ ಉತ್ಸವದಲ್ಲಿ ಪಾಲ್ಗೊಂಡರು.
ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ ಹಾಗೂ ಶ್ರೀ ಕೊಡಮಂ ತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ ( ತಿಮ್ಮ ಕಾವರು) ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿತು.
ನಡ್ಯೋಡಿ ಗುತ್ತು ಭಾಸ್ಕರ ಮುದ್ದ , ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ , ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು , ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್,ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು ಮುಂತಾದವರು ಉಪಸ್ಥಿತರಿದ್ದರು.ರಾತ್ರಿ ಶ್ರೀ ಕೊಡಮಂತ್ತಾಯ ದೈವದ ನೇಮೋತ್ಸವ ನಡೆಯಲಿದೆ.
ಜ.3 ರ ಶನಿವಾರದಂದು ರಾತ್ರಿ 9 ರಿಂದ ಶ್ರೀಕಾಂತೇರಿ ಜುಮಾದಿ ದೈವದ ನೇಮೋತ್ಸವ,ಜ.4 ರ ಭಾನುವಾರ ರಾತ್ರಿ 9 ರಿಂದ ಶ್ರೀಜಾರಂದಾಯ ದೈವದ ನೇಮೋತ್ಸವ,ಜ.5 ರ ಸೋಮವಾರ ರಾತ್ರಿ 9 ರಿಂದ ಶ್ರೀಸರಳ ಜುಮಾದಿ ದೈವದ ನೇಮೋತ್ಸವ,ಜ.6 ರ ಮಂಗಳವಾರ ರಾತ್ರಿ 9 ರಿಂದ ಶ್ರೀ ಪಿಲಿಚಾಮುಂಡಿ ದೈವದ ನೇಮೋತ್ಸವ ಹಾಗೂ ಜ.7 ರ ಬುಧವಾರ ಬೆಳಿಗ್ಗೆ 10 ಕ್ಕೆ ಧ್ವಜ ಅವರೋಹಣದೊಂದಿಗೆ ವರ್ಷಾವಧಿ ಜಾತ್ರೆಯು ಸಂಪನ್ನಗೊಳ್ಳ ಲಿದೆ.ಜ.2 ರಿಂದ ಜ.6 ರ ವರೆಗೂ ಮಧ್ಯಾಹ್ನ 1ರಿಂದ ರಾತ್ರಿವರೆಗೂ ನಿರಂತರ ಅನ್ನದಾನ ನಡೆಯಲಿದೆ.

