ಶಿವತಿಕೆರೆ, ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ವಾರ್ಷಿಕ ಜಾತ್ರೋತ್ಸವ ದಿನಾಂಕ 12 -02-2026 ರಂದು ಧ್ವಜಾರೋಹಣ ದೊಂದಿಗೆ ಆರಂಭಗೊಂಡು ದಿನಾಂಕ 15-02-2026 ನೇ ಆದಿತ್ಯವಾರ ಮಹಾಶಿವರಾತ್ರಿಯ ವರೆಗೆ ಬ್ರಹ್ಮ ಶ್ರೀ ಮುರಳೀಧರ ತಂತ್ರಿ ಎಡಪದವು ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ತೋರಣ ಮುಹೂರ್ತ ನವಕಪ್ರಧಾನ ಹೋಮ ಕಲಶಾಭಿಷೇಕ ಧ್ವಜಾರೋಹಣ ಮಹಾಪೂಜೆ ಕಟ್ಟೆ ಪೂಜೆ ಮಹಾ ಪೂಜೆ ಭೂತಬಲಿ ಮಹಾ ಶಿವರಾತ್ರಿ ದಿನದಂದು ಸಹಸ್ರ ಬಿಲ್ವಾರ್ಚನೆ ಭಜನೆ ಉತ್ಸವ.

ಬಲಿ ಪಲ್ಲಕ್ಕಿ ಉತ್ಸವ ಚಂದ್ರ ಮಂಡಲ ರಥೋತ್ಸವ ವಸಂತ ಕಟ್ಟೆ ಪೂಜೆ ಓಕುಳಿ ಅವಭೃತ ಹಾಗೂ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಯಿತು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರಿದ್ದರು. ಬ್ರಹ್ಮಶ್ರೀ ಮುರಳೀಧರ ತಂತ್ರಿ ಎಡಪದವು, ರಾಜೇಂದ್ರ ಭಟ್ ಅರ್ಚಕರು ಆಡಳಿತ ಮೊಕ್ತೇಸರರು ಚಂದ್ರಶೇಖರ ಶೆಟ್ಟಿ, ಗೌರವಾಧ್ಯಕ್ಷ ಸುಂದರ ದೇವಾಡಿಗ , ಸುರೇಂದ್ರ ಶೆಟ್ಟಿ ಸಂಜೀವ ದೇವಾಡಿಗ ಸುದರ್ಶನ ಭಂಡಾರಿ ಬಾಲಕೃಷ್ಣ ದೇವಾಡಿಗ, ಕೆ. ಬಿ. ಗುರುಪ್ರಸಾದ್ ರಾವ್ ಶ್ರೀಮತಿ ಜಯಂತಿ ಎನ್. ದೇವಾಡಿಗ ಮೊಕ್ತೇಸರ ರುಗಳು ಸೇವಾ ಸಮಿತಿ ಅಧ್ಯಕ್ಷ ನಾಗೇಶ್ ದೇವಾಡಿಗ, ಸೇವಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಅರುಣ ದಿನೇಶ್ ಮತ್ತು ಸೇವಾ ಸಮಿತಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಜಾತ್ರೋತ್ಸವದಲ್ಲಿ ಭಾಗವಹಿಸಿದರು.


