STA ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ( ರಿ )117 ಪ್ರಧಾನ ಕಛೇರಿ ಗೋರಿಗುಡ್ಡೆ ಮಂಗಳೂರು ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ 22 – 7 – 25 ಮಂಗಳವಾರ ಶ್ರೀ ಗುರು ಸಭಾಭವನದಲ್ಲಿ ವಲಯದ ಅಧ್ಯಕ್ಷರಾದ ಹರೀಶ್ ಟೈಲರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರು ವೇದಾವತಿ ಜನಾರ್ಧನ ರವರು ಮಾತನಾಡಿ ಕ್ಷೇತ್ರದ ಆಟಿಡೊಂಜಿ ದಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರಜ್ವಲ್ ಕುಮಾರ್ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರು ಜಯಂತ್ ಉರ್ಲಾ೦ಡಿ ಜಿಲ್ಲಾ ಸಮಿತಿ ಉಪಾಧ್ಯಕ್ಷರು ಶಾಂಭವಿ ಬಂಗೇರ ಜಿಲ್ಲಾ ಸಮಿತಿಯ ಸದಸ್ಯರುಗಳಾದ ಕುಶಲಪ್ಪ ಗೌಡ ರಾಜು ಪೂಜಾರಿ, ವಸಂತ ಬೆಳ್ತಂಗಡಿ ,ಪ್ರಶಾಂತ್ ಟೈಲರ್ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಉಜಿರೆ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ರವೀಂದ್ರ ಟೈಲರ್ ಬೆಳ್ತಂಗಡಿ ವಲಯದ ಅಧ್ಯಕ್ಷರು, ಸುರೇಂದ್ರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಈ ಸಭೆಯಲ್ಲಿ ವಲಯದ ಸದಸ್ಯರ ಗುರುತಿನ ಕಾರ್ಡ್ ವಿತರಣೆ ಹೊಸ ಸದಸ್ಯರ ನೋಂದಾವಣೆ ಮತ್ತು ನವೀಕರಣ ಪ್ರಕ್ರಿಯೆ ನಡೆಯಿತು ಕಾರ್ಯಕ್ರಮವು ಸಾಂಕೇತಿಕವಾಗಿ ದೇಜಪ್ಪ ಟೈಲರ್ ಶಿರ್ಲಾಲು ಇವರ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ರೇಖಾ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಸಭೆಯಲ್ಲಿ ವಲಯದ ಸದಸ್ಯರಾದ ಮೋಹನ್ ದಾಸ್ ರವರ ಮಗ ಅಚಿಂತ್ಯದಾಸ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಇವರು JEE ಪರೀಕ್ಷೆಯಲ್ಲಿ ,ಇಂಡಿಯಾದಲ್ಲಿ 1542 ನೇ ರಾಂಕ್ , ಸಾದಿಸಿದರು, ಸಭೆಯಲ್ಲಿ ವಲಯದ ರಾಜು ಪೂಜಾರಿ ಜಿಲ್ಲಾ ಸಮಿತಿ ಸದಸ್ಯರು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು ಈ ಸಭೆಯಲ್ಲಿ ಹೊಸದಾಗಿ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ವಿನೂಷ ಪ್ರಕಾಶ್ ಕಾರ್ಯದರ್ಶಿಯಾಗಿ ಜಗನ್ನಾಥ ಟೈಲರ್ ಸುಲ್ಕೇರಿ ಮೊಗ್ರು ಕೋಶಾಧಿಕಾರಿ ರೇಖಾ ಅಳದಂಗಡಿ ಉಪಾಧ್ಯಕ್ಷರುಗಳಾಗಿ ಸುರೇಂದ್ರ, ರೇವತಿ ಜೊತೆ ಕಾರ್ಯದರ್ಶಿ, ಅಕ್ಷಯ್ ಮತ್ತು ಪ್ರತಿಮ ಇವರನ್ನು ಆಯ್ಕೆ ಮಾಡಲಾಯಿತು ಕ್ಷೇತ್ರ ಸಮಿತಿಗೆ ಮೋಹನ್ ದಾಸ್ ,ರಾಜು ಪೂಜಾರಿ, ಲಾನ್ಸಿ ಡಿಸೋಜಾ ಹರೀಶ್ ಟೈಲರ್ ,ಜನಿತ ಕುದ್ಯಾಡಿ ಇವರುಗಳನ್ನು ಆಯ್ಕೆ ಮಾಡಲಾಯಿತು ಸಂಘಟನಾ ಕಾರ್ಯದರ್ಶಿಯಾಗಿ ಶಾಂತಿ ಮಮತಾ, ಶೋಭಾ, ಪವಿತ್ರ ಸಕೇತಾ ಪಿಲ್ಯ, ಮಲ್ಲಿಕಾ ,ಶಕುಂತಲಾ ,ಸವಿತಾ ಇವರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ 92 ಮಂದಿ ಟೈಲರ್ ವೃತ್ತಿ ಬಾಂಧವರು ಭಾಗವಹಿಸಿದ್ದರು ಮೋಹನ್ ದಾಸ್ ನಿರೂಪಿಸಿ ಲಾನ್ಸಿ ಡಿಸೋಜಾ ವರದಿ ವಾಚಿಸಿ ಜಗನ್ನಾಥ ಟೈಲರ್ ಧನ್ಯವಾದಗಳು ಮೂಲಕ ಕಾರ್ಯಕ್ರಮ ಕೊನೆಗೊಳಿಸಿದರು