ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ

0
38

ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ, ದೀಪ ಬೆಳಗುವುದರೊಂದಿಗೆ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೋಭಾ ಶೆಟ್ಟಿ ಬಿ.ಇ.ಓ ಕುಂದಾಪುರ, ಶ್ರೀ ಎಂ.ಬಾಲಕೃಷ್ಣ ಶೆಟ್ಟಿ ಆರ್‌ಟಿಡಿ ಪ್ರಾಂಶುಪಾಲರು ಕಟೀಲ್, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದಿನಕರ ಶೆಟ್ಟಿ, ಶಾಲಾ ವಿದ್ಯಾರ್ಥಿ-ಪೋಷಕ ಸಮಿತಿ ಅಧ್ಯಕ್ಷರಾದ ಶ್ರೀಮತಿ ಪ್ರೇಮ, ಬ್ರಹ್ಮಶ್ರೀ ಎಜುಕೇಶನ್ ಟ್ರಸ್ಟ್ ಸದಸ್ಯರಾದ ಶ್ರೀ ಯತಿರಾಜ್ ಶೆಟ್ಟಿ , ಶ್ರೀ ಮಂಜುನಾಥ್ ಶೆಟ್ಟಿ ,ಶ್ರೀ ನಾಗೇಶ್ ಶ್ರೀ ಮಹೇಶ್ ಶೆಟ್ಟಿ ,ಶ್ರೀ ಸುಧೀರ್ ಶಾಲಾ ವಿದ್ಯಾರ್ಥಿ ನಾಯಕನಾದ ಪೃಥ್ವಿರಾಜ್ ,ಹಾಗೂ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ, ಆಡಳಿತ ಅಧಿಕಾರಿಯಾದ ಆಶಾ ಶೆಟ್ಟಿ, ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಅಡಪ ಉಪಸ್ಥಿತರಿದ್ದು ಸಾಧನೆಗೈದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಶೋಭಾ ಶೆಟ್ಟಿ ಅವರು “20 ವರ್ಷಗಳಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ, ಶೈಕ್ಷಣಿಕ ಪ್ರಗತಿಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ, ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಲ್ಲೂ ಕೂಡ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಲು ಹೆಮ್ಮೆ ಆಗುತ್ತದೆ. ಪೋಷಕರನ್ನು ಉದ್ದೇಶಿಸಿ “ಬೇರೆ ಮಕ್ಕಳೊಂದಿಗೆ ನಿಮ್ಮ ಮಗುವನ್ನು ಹೋಲಿಸಬೇಡಿ , ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿದೆ,ಅಂಕ ಮಾತ್ರ ಮುಖ್ಯವಲ್ಲ ಪೋಷಕರು ಮತ್ತು ಶಾಲೆ ಒಂದಾಗಿದ್ದು ಮಕ್ಕಳ ಬೆಳವಣಿಗೆಯನ್ನು ಬೆಂಬಲಿಸಬೇಕು ಎಂದು ತಿಳಿಸಿದರು.

ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಪೂರ್ಣ ಕುಂಭದ ಮೂಲಕ ಶ್ರೀ ಶ್ರೀ ಶ್ರೀ ಗುರುವಂದನ ಸ್ವಾಮೀಜಿಯನ್ನು ಆಹ್ವಾನಿಸಲಾಯಿತು. ಈ ವಿಶೇಷ ಆಹ್ವಾನ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ, ಪ್ರತಿಯೊಬ್ಬರಲ್ಲೂ ಶಿಕ್ಷಣ ಮತ್ತು ಆಧ್ಯಾತ್ಮ ಪ್ರಮುಖ ಸ್ಥಾನದಲ್ಲಿರುತ್ತದೆ, ಶಿಕ್ಷಣ ಎಂದರೆ ಪ್ರತಿ ಕ್ಷಣವು ಕಲಿಯುವುದು ಶಾರೀರಿಕ ಬೆಳವಣಿಗೆ ಮಾತ್ರ ಸಾಕಾಗುವುದಿಲ್ಲ ಬುದ್ಧಿ ಬೆಳವಣಿಗೆಯು ಮುಖ್ಯ ಎಷ್ಟು ಉದ್ದ ಎಷ್ಟು ಅಗಲ ಅಲ್ಲ ಎಷ್ಟು ಪ್ರಜ್ಞಾವಂತರಾಗಿದ್ದಾರೆ ಎಂಬುದು ಮುಖ್ಯ, ಆಧ್ಯಾತ್ಮ ಎಂದರೆ ಸುಂದರವಾಗಿ ಬದುಕುವುದು ಅರಿವು ಮೂಡಿಸುವುದು ಶಿಕ್ಷಣದಿಂದ ಸಾಧ್ಯ ಶಾರದ ಎಂದರೆ ಜ್ಞಾನ ಅರಿವು ಬೆಳಕು ಅಂಧಕಾರ ಹೋಗಲು ಬೆಳಕು ಬೇಕು ಶಿಸ್ತಿನಿಂದ ಜೀವನ ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ ಸಂಸ್ಥೆ ಕಟ್ಟುವುದು ಕಷ್ಟ ಆದರೆ ಮಕ್ಕಳ ಭವಿಷ್ಯ ರೂಪಿಸುವುದು ಇನ್ನೂ ಕಷ್ಟಕರ ಶಿಕ್ಷಕರ ಜವಾಬ್ದಾರಿ ದೊಡ್ಡದು ಅವರು ಮಕ್ಕಳಿಗೆ ಎಲ್ಲಾ ಕ್ಷೇತ್ರದಲ್ಲಿ ಕಲಿಸಲು ನೆರವಾಗಬೇಕು, ಮಕ್ಕಳಲ್ಲಿ ಮಾನವೀಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಸಹ ಶಿಕ್ಷಕಿಯರಾದ ಪ್ರಿಯ ಹಾಗೂ ವನಿತಾ ಕಾರ್ಯಕ್ರಮವನ್ನು ನಿರೂಪಿಸಿ , ಮುಖ್ಯೋಪಾಧ್ಯಯರಾದ ಶ್ರೀಮತಿ ರೇಷ್ಮಾ ಅಡಪ ಸ್ವಾಗತಿಸಿ ,ಶ್ರೀಮತಿ ವೀಣಾ ವಂದನಾರ್ಪಣೆ ಗೈದರು.

LEAVE A REPLY

Please enter your comment!
Please enter your name here