ಜವನೆರ್ ಬೆದ್ರ ಫೌಂಡೇಶನ್’ನ ಮತ್ತೊಂದು ಕನಸು ನನಸು.! ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ‘ಅಬ್ಬಕ್ಕ’ ಪ್ರತಿಮೆ ಲೋಕಾರ್ಪಣೆ

0
30

ಮೂಡುಬಿದ್ರೆ: ಆಧುನಿಕ ಸಮಾಜದಲ್ಲಿ ನೂರಾರು ಸಂಘ ಸಂಸ್ಥೆಗಳು ಸಮಾಜದ ಶ್ರೆಯೋಭಿವೃದ್ದಿಗಾಗಿ ಕಾರ್ಯನಿರ್ವಹಿಸುತ್ತಿದೆ. ಅಂತಹ ಸಂಘ ಸಂಸ್ಥೆಗಳಲ್ಲಿ ಬೆದ್ರದ ಜವನೆರ್ ಬೆದ್ರ ಫೌಂಡೇಶನ್(ರಿ.) ಕೂಡ ಒಂದು. ಅಮರ್ ಕೋಟೆ ನೇತೃತ್ವದಲ್ಲಿ ನೂರಾರು ಯುವಕರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಸ್ವಚ್ಚತೆ, ಆರೋಗ್ಯ, ಧಾರ್ಮಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುವ ಮೂಲಕ ಮೂಡುಬಿದ್ರೆಯ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸದ್ಯ ಮತ್ತೊಂದು ಹೊಸ ಕಾರ್ಯದ ಮೂಲಕ ಜವನೆರ್ ಬೆದ್ರ ಫೌಂಡೇಶನ್(ರಿ.) ತನ್ನ ಬಹುಕಾಲದ ಕನಸೊಂದನ್ನು ನನಸು ಮಾಡಿಕೊಂಡಿದೆ.

ಉಳ್ಳಾಲದ ರಾಣಿ ಅಬ್ಬಕ್ಕ ಮೂಡುಬಿದ್ರೆಯ ಮಣ್ಣಿನ ಮಗಳು, ಅವಳಿಗೆ ಮೂಡುಬಿದ್ರೆಯ ಮಣ್ಣಿನಲ್ಲಿ ಅಧ್ಬುತವಾದ ಪ್ರತಿಮೆ ನಿರ್ಮಾಣವಾಗಬೇಕು. ಆ ಪ್ರತಿಮೆ ಮೂಡುಬಿದ್ರೆಯ ಕೇಂದ್ರ ಬಿಂದುವಾಗಿರುವ ಯಾವುದಾದರೂ ಒಂದು ಸ್ಥಳದಲ್ಲಿರಬೇಕು ಎಂಬುದು ಜವನೆರ್ ಬೆದ್ರದ ಆಶಯವಾಗಿತ್ತು ಅದರೆ ಬದಲಾದ ಸನ್ನಿವೇಶದಲ್ಲಿ ಅದು ಬೇರೆ ತಿರುವು ಪಡೆಯಿತು ಅದರೆ ಹಿಡಿದ ಹಠ ಸಾಧಿಸದೇ ಬಿಡೇನೂ ಎನ್ನುವ ಮಾತಿನಂತೆ ಜವನೆರ್ ಬೆದ್ರ ಫೌಂಡೇಶನ್(ರಿ.) ಚೌಟರ ಅರಮನೆಯ ಎದುರುಗಡೆ ಅಬ್ಬಕ್ಕ ಕಿರು ಉದ್ಯಾನವನ ನಿರ್ಮಾಣ ಮಾಡಿ ಕಿರಿದಾದ ಅಬ್ಬಕ್ಕ ಪ್ರತಿಮೆಯನ್ನು ಸ್ಥಾಪಿಸಿತು. ಈ ಮೂಲಕ ತಾವೂ ಕಂಡ ಕನಸನ್ನು ಸುಮಾರು ೬ ವರ್ಷಗಳ ಹಿಂದೆಯೇ ನನಸು ಮಾಡಿಕೊಂಡರು.

ಪ್ರಸ್ತುತ ಅಬ್ಬಕ್ಕಳ ಕಿರಿದಾದ ಪ್ರತಿಮೆಯ ಬದಲಿಗೆ 6.5 ಆಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂಬ ಯೋಜನೆಯನ್ನು ರೂಪಿಸಿ ಆ ಮೂಲಕ ಅದನ್ನು ನಿರ್ಮಾಣ ಮಾಡಿದರು. ಈ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮವೂ ನವಂಬರ್ 1ರ ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿರುವ ದಿನೇಶ್ ಗುಂಡೂರಾವ್ ಕೈಯಿಂದ ನೆರೆವೆರಿತು. ಈ ಸುಂದರ ಕಾರ್ಯಕ್ರಮದಲ್ಲಿ ಮೂಡುಬಿದ್ರೆಯ ಜೈನ ಮಠದ ಮಹಾಸ್ವಾಮಿಜಿಗಳಾದ ಡಾ ಸ್ವಸ್ತೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದರು.

ದಿನೇಶ್ ಗುಂಡೂರಾವ್ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರೆ, ಡಾ ಸ್ವಸ್ತೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯವರು ನಾಮಫಲಕವನ್ನು ಲೋಕಾರ್ಪಣೆಗೊಳಿಸಿದರು. ಪ್ರತಿಮೆ ಲೋಕಾರ್ಪಣೆಯ ಬಳಿಕ ಮಾತನಾಡಿದ ಸಚಿವರು ಪೋರ್ಚುಗೀಸರ ವಿರುದ್ದ ಒರ್ವ ಮಹಿಳೆಯಾಗಿ ಹೋರಾಡಿ ಆನೇಕ ಯುದ್ದಗಳನ್ನು ಮಾಡಿರುವ ಅಬ್ಬಕ್ಕಳ ಕುರಿತಾಗಿ ಪಠ್ಯ ಕ್ರಮದಲ್ಲಿ ಸೇರಿಸುವ ಅಗತ್ಯವಿದೆ ಈ ಕುರಿತು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಫೌಂಡೇಶನ್’ನ ಈ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಅಭಿನಂದಿಸಿದರು. 

LEAVE A REPLY

Please enter your comment!
Please enter your name here