ಉಜಿರೆ: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕರಿಸಿದ ಪಿಂಚಣಿ ಕಾಯ್ದೆಯಿಂದ ಪಿಂಚಣಿದಾರರಿಗೆ ಆರ್ಥಿಕ ನಷ್ಟವಾಗುವುದರಿಂದ ಕಾಯಿದೆಯನ್ನು ಮರುಪರಿಶೀಲಿಸಬೇಕೆಂದು ಕೋರಿ ಬೆಳ್ತಂಗಡಿ ತಾಲ್ಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಶನಿವಾರ ಬೆಳ್ತಂಗಡಿಯಲ್ಲಿ ತಹಶೀಲ್ದಾರರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿ ಡಾ. ಜಯಕೀರ್ತಿ ಜೈನ್, ಧರ್ಮಸ್ಥಳ, ತಾಲ್ಲೂಕು ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ, ಉಪಾಧ್ಯಕ್ಷ ಸನ್ಮತ್‌ಕುಮಾರ್ ನಾರಾವಿ, ದಾಸಪ್ಪ ಗೌಡ, ವಿಶ್ವಾಸ ರಾವ್, ಜಗನ್ನಿವಾಸ ರಾವ್, ಪದ್ಮಕುಮಾರ್, ಮಂಜಪ್ಪ ನಾಯಕ್, ಸುರೇಂದ್ರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.