ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ – ಉಡುಪಿ ನಗರ ವತಿಯಿಂದ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮನವಿ ಪತ್ರವನ್ನು ಕೊಡಲಾಯಿತು.
ಉಡುಪಿಯಿಂದ ಕುಂದಾಪುರಕ್ಕೆ ತೆರಳುವ ಬಸ್ಸಿನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತಿದ್ದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಬಸ್ಸಿನಲ್ಲಿ ವಿದ್ಯಾರ್ಥಿಗಳಿಗೆ C(ಅರ್ಧ ಮೊತ್ತ) ಟಿಕೆಟ್ ಕೊಡದೆ ಪೂರ್ತಿ ಮೊತ್ತದ ಟಿಕೆಟ್ ಪಡೆಯುವಂತೆ ಬಸ್ಸಿನ ನಿರ್ವಾಹಕರು ದಬಾಯಿಸುತ್ತಾರೆ ಮತ್ತು ಒಂದೊಂದು ಬಸ್ಸಿನಲ್ಲಿ ಕೇವಲ ಐದು ವಿದ್ಯಾರ್ಥಿಗಳಿಗೆ ಮಾತ್ರ C ಟಿಕೆಟಿನಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತಾರೆ.

ಪಾಸ್ ಇದ್ದರೂ ಕೂಡ ವಿದ್ಯಾರ್ಥಿಗಳ ಪೂರ್ತಿ ಮೊತ್ತವನ್ನು ತೆಗೆದುಕೊಳ್ಳುತ್ತಾರೆ ಇದರಿಂದ ಬಹಳ ತೊಂದರೆಯನ್ನು ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನ ಕಾರ್ಯದರ್ಶಿಯಾದ ರೋಹಿತ್, ನಗರ ಸಹ ಕಾರ್ಯದರ್ಶಿಯಾದ ವಿನೀತ್, ನಗರ ಖೇಲೋ ಭಾರತ್ ಸoಯೋಜಕರಾದ ಶಿವನ್, ಎಮ್ ಜಿ ಎಮ್ ಕಾಲೇಜು ಘಟಕದ ಉಪಾಧ್ಯಾಕ್ಷರಾದ ಚಿರಾಗ್ ಹಾಗೂ ಎಮ್ ಜಿ ಎಮ್ ಕಾಲೇಜು ಘಟಕದ ಕಾರ್ಯದರ್ಶಿಯಾದ ನಿಹಾರಿಕ ಇವರಿಂದ ಮನವಿ ಪತ್ರವನ್ನು ನೀಡಲಾಯಿತು.

