ವರದಿ ರಾಯಿ ರಾಜ ಕುಮಾರ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 26- 27ನೇ ಶೈಕ್ಷಣಿಕ ಸಾಲಿನ ಉಚಿತ ಶಿಕ್ಷಣ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರನೇ ತರಗತಿಯಿಂದ 9ನೇ ತರಗತಿಯ ತನಕ ಕನ್ನಡ ಮಾಧ್ಯಮದ ಉಚಿತ ಶಿಕ್ಷಣವು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದೊರಕಲಿದ್ದು ಆಸಕ್ತ ವಿದ್ಯಾರ್ಥಿಗಳು ಜನವರಿ 15ಕ್ಕೆ ಮೊದಲು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಬಂದ ಅರ್ಜಿಗಳಿಗೆ ಪ್ರವೇಶ ಪತ್ರಗಳನ್ನು ಆನ್ಲೈನ್ ನಲ್ಲಿಯೇ ಫೆಬ್ರವರಿ ಒಂದರ ಒಳಗೆ ಮುದ್ರಣ ಮಾಡಿಕೊಳ್ಳತಕ್ಕದ್ದು. ಪ್ರವೇಶಪತ್ರದಲ್ಲಿ ಮುಂದಿನ ಹಂತದ ವಿವರಗಳು ಲಭ್ಯವಿದ್ದು , ಮಾರ್ಚ್ 1ನೇ ತಾರೀಖಿನಂದು ಪ್ರಥಮ ಹಂತದ ಆಯ್ಕೆ ಪ್ರಕ್ರಿಯೆ ಮುಗಿಯಲಿದೆ. ಆಯ್ಕೆಗೊಂಡವರಿಗೆ ಸಂಪೂರ್ಣ ಉಚಿತ ಶಿಕ್ಷಣ ದೊರಕಲಿದೆ. ಆಸಕ್ತರು ಇಲ್ಲಿ ನೀಡಿರುವ ಸ್ಕ್ಯಾನರ್ ಅಥವಾ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 15 ಆಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.