ಬೆಂಗಳೂರು: ಕಳೆದ 65 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ದಕ್ಷಿಣಕನ್ನಡಿಗರ ಸಂಘವು, ಈ ವರ್ಷವೂ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ವಾಸಿಸುವ ಉಡುಪಿ, ದಕ್ಷಿಣಕನ್ನಡ ಹಾಗೂ ಕಾಸರಗೋಡಿನ ಮೂಲದವರು 2024-25ನೇ ಸಾಲಿನ SSLC ಮತ್ತು PUC ಪರೀಕ್ಷೆಗಳಲ್ಲಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ತಮ್ಮ ಅಂಕಪಟ್ಟಿಯ ನಕಲನ್ನು 2025 ಅಕ್ಟೋಬರ್ 16ರೊಳಗಾಗಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿದೆ. ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಂಘದ ಅಧ್ಯಕ್ಷ ಡಾ|| ಕೆ.ಸಿ. ಬಲ್ಲಾಳ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಂಘದ ವತಿಯಿಂದ ವಿನಂತಿಸಲಾಗಿದೆ.
ವಿಳಾಸ:
ಡಾ|| ಕೆ.ಸಿ. ಬಲ್ಲಾಳ,
ಅಧ್ಯಕ್ಷರು, ದಕ್ಷಿಣಕನ್ನಡಿಗರ ಸಂಘ,
196, 5ನೇ ಮುಖ್ಯರಸ್ತೆ, ವ್ಯಯಲಿಕಾವಲ್,
ಬೆಂಗಳೂರು – 560003.