ಏ.02 : ಮಿಜಾರು ಅಣ್ಣಪ್ಪ ಸಂಸ್ಮರಣಾ ಗೋಷ್ಠಿ ಹಾಗೂ ಯಕ್ಷಗಾನ ಪ್ರದರ್ಶನ

0
9

ಮಂಗಳೂರು : ಯಕ್ಷಗಾನ ರಂಗದ ಹಾಸ್ಯ ಚಕ್ರವರ್ತಿಯಾಗಿದ್ದ ಮಿಜಾರು ಅಣ್ಣಪ್ಪ ಅವರ ಸಂಸ್ಮರಣಾ ಗೋಷ್ಠಿ ಹಾಗೂ ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರದರ್ಶನ ಏ.2 ರಂದು ಮಧ್ಯಾಹ್ನ 2.00ಕ್ಕೆ ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಶ್ರೀ ಯಕ್ಷ ಮಿತ್ರಕಲಾ ಮಂಡಳಿ ಬೆಳುವಾಯಿ ಹಾಗೂ ಶ್ರೀ ಮಹಾವೀರ ಕಾಲೇಜು ಮೂಡಬಿದರೆ ಇವರ ಸಂಯುಕ್ತ ಆಶ್ರಯದಲ್ಲಿ ಕರ‍್ಯಕ್ರಮ ನಡೆಯಲಿದೆ.

ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಭಯಚಂದ್ರ ಜೈನ್ ಕರ‍್ಯಕ್ರಮವನ್ನು ಉದ್ಘಾಟನೆ ನೆರವೇರಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು.

ಹಿರಿಯ ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಗೋಣಿಬೀಡು ಅವರು ಸಂಸ್ಮರಣಾ ಉಪನ್ಯಾಸ ಮಾಡುವರು. ಕರ‍್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಯಕ್ಷ ದೇವ ಮಿತ್ರಮಂಡಳಿಯ ಗೌರವಾಧ್ಯಕ್ಷ ಕೆ.ಶ್ರೀಪತಿ ಭಟ್, ಬಿಜಿಪಿಯ ಮಾಜಿ ದ.ಕ. ಜಿಲ್ಲಾ ಅಧ್ಯಕ್ಷ ಸುರ‍್ಶನ್ ಎಂ, ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಧಕೃಷ್ಣ. ತುಳು ಸಂಘದ ಸಂಚಾಲಕರಾದ ಪ್ರವೀಣ್ ಭಂಡಾರಿ, ಉದ್ಯಮಿ ಸದಾಶಿವ ಮಿಜಾರು ಉಪಸ್ಥಿತರಿರುವರು.

ಸಂಸ್ಮರಣಾ ಗೋಷ್ಠಿ ಬಳಿಕ ಎಂ ದೇವಾನಂದ ಭಟ್ ಬೆಳುವಾಯಿ ಅವರ ಸಂಯೋಜನೆಯಲ್ಲಿ ಹಿರಿಯ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here