ಬಪ್ಪನಾಡು : ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ವಿಜ್ಞಾಪನಾ ಪತ್ರ ಬಿಡುಗಡೆ

0
15

ಮುಲ್ಕಿ : ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನ ಬ್ರಹ್ಮರಥ ನಿರ್ಮಾಣ ಮತ್ತು ಕ್ಷೇತ್ರಪಾಲ ಗುಡಿಯ ನವೀಕರಣ ಹಾಗೂ ದೇವಳದ ವಿವಿಧ ಕಾಮಗಾರಿಗಳ ಬಗ್ಗೆ ವಿಜ್ಞಾಪನ ಪತ್ರ ಬಿಡುಗಡೆ ಸಮಾರಂಭ ಎ.1ನೇ ಬುಧವಾರ ಬೆಳಿಗ್ಗೆ 10-00ಕ್ಕೆ ಕ್ಷೇತ್ರದಲ್ಲಿ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮನವಿ ಪತ್ರ ಬಿಡುಗಡೆ ಮಾಡಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು ಮಾತನಾಡಿ ದೇವಸ್ಥಾನದ ಅಭಿವೃದ್ಧಿಗೆ ದಾನಿಗಳ, ಗ್ರಾಮಸ್ಥರ ಹಾಗೂ ಭಕ್ತರ ಸಹಕಾರ ಅಗತ್ಯ ಎಂದರು.

ಈ ಸಂದರ್ಭ ಅತ್ತೂರು ಬೈಲು ರಾಘವೇಂದ್ರ ಉಡುಪ, ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಚಿವ ಅಭಯ ಚಂದ್ರ ಜೈನ್,
ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ,ಮಾಜೀ ಮೊಕ್ತೇಸರ ಡಾ. ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ರಾವ್ ಕೊರಿಯಾರ್,ಕ್ಷೇತ್ರದ ಮಾಜೀ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಾದೆಮನೆ ಜಯಂತ ರೈ ಅಭಿವೃದ್ಧಿ ಸಮಿತಿಯ ರಾಮಚಂದ್ರ ನಾಯಕ್ ಕೋಲ್ನಾಡ್ ಗುತ್ತು,ಸುನಿಲ್ ಆಳ್ವ, ಸುಕುಮಾರ್ ಶೆಟ್ಟಿ, ಸೂರ್ಯ ಕುಮಾರ್ ಹಳೆಯಂಗಡಿ,ಮುಲ್ಕಿ ನಾಲ್ಕು ಪಟ್ನ ಮೊಗವೀರ ಸಭಾ ಅಧ್ಯಕ್ಷ ಚಂದ್ರಕಾಂತ ಶ್ರೀಯಾನ್, ಸಮಿತಿಯ ಪುರಂದರ ಶೆಟ್ಟಿಗಾರ, ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವಾಮನ್ ಇಡ್ಯಾ, ದಾನಿ ಶರತ್ ಸಾಲ್ಯಾನ್, ರವಿರಾಜ್ ಮುಂಬೈ, ಡಾ ಹರಿಶ್ಚಂದ್ರ ಪಿ ಸಾಲ್ಯಾನ್, ಸುಕುಮಾರ್ ಎನ್ ಶೆಟ್ಟಿ ತಾಳಿಪಾಡಿಗುತ್ತು, ಯಾದವ ದೇವಾಡಿಗ ಹಳೆಯಂಗಡಿ, ಸುಜಿತ್ ಸಾಲ್ಯಾನ್, ಭಾಸ್ಕರ್ ಸಾಲ್ಯಾನ್ ಹಳೆಯಂಗಡಿ,ಚಂದ್ರಶೇಖರ ಸುವರ್ಣ, ಸಂಜೀವ ದೇವಾಡಿಗ, ದಿನೇಶ್ ಹೆಗ್ಡೆ ಮಾನಂಪಾಡಿ ,ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್ ವರ್ಮಾ ಮತ್ತಿತರರು ಉಪಸ್ಥಿತರಿದ್ದರು. ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು.

.

LEAVE A REPLY

Please enter your comment!
Please enter your name here