ಎ.ಪಿ.ಎಸ್. ಒಲಿಂಪಿಕ್ಸ್ – 2025 ಕ್ರೀಡಾಕೂಟಕ್ಕೆ ಚಾಲನೆ

0
73


ಬೆಂಗಳೂರು,ಅ.5: ಸಹಕಾರ, ಉತ್ಸಾಹ ಮತ್ತು ಕ್ರೀಡಾ ಮನೋಭಾವವನ್ನು ಆಚರಿಸುವ ಉದ್ದೇಶದಿಂದ ಆಚಾರ್ಯ ಪಾಠಶಾಲಾದಿಂದ ಎ.ಪಿ.ಎಸ್. ಮೈದಾನದಲ್ಲಿಂದು “ಎ.ಪಿ.ಎಸ್. ಒಲಿಂಪಿಕ್ಸ್ – ಅನಂತ ಜ್ಯೋತಿ” ಕ್ರೀಡಾಕೂಟ ಆರಂಭವಾಯಿತು.
ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ವೈಯಕ್ತಿಕ ಮತ್ತು ತಂಡದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಮಾಜಿ ರಣಜಿ ಆಟಗಾರ ಪ್ರಜ್ವಲ್ ರಾಜ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾ ಸಮಿತಿಯ ಅಧ್ಯಕ್ಷ ಟಿ.ವಿ. ಪ್ರಭು ಮಾತನಾಡಿ, ಎಲ್ಲರೂ ಕ್ರೀಡಾ ಮನೋಭಾವದಿಂದ ಆಡಬೇಕು. ಕ್ರೀಡೆ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದ್ದು, ಕ್ರೀಡಾ ಚಟುವಟಿಕೆ ಜೀವನ ಅವಿಭಾಜ್ಯ ಅಂಗವಾಗಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥ ಡಾ. ಸಿ.ಎ. ಡಾ. ವಿಷ್ಣು ಭಾರತ ಅಲಂಪಲ್ಲಿ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಎ.ಪಿ.ಎಸ್. ಮೈದಾನದಲ್ಲಿ 500ಕ್ಕೂ ಹೆಚ್ಚು ಕ್ರೀಡಾ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎಲ್ಲೆಡೆ ಹರ್ಷ, ಘೋಷಣೆಗಳು ಮತ್ತು ಸ್ಪರ್ಧೆಯ ಉತ್ಸಾಹ ತುಂಬಿತ್ತು. “ಎ.ಪಿ.ಎಸ್. ಒಲಿಂಪಿಕ್ಸ್ ಕೇವಲ ಸ್ಪರ್ಧೆಯಲ್ಲ — ಇದು ಉತ್ಸಾಹ, ಶಿಸ್ತು ಮತ್ತು ಒಗ್ಗಟ್ಟಿನ ಹಬ್ಬದಂತೆ ಗೋಚರಿಸಿತು.

LEAVE A REPLY

Please enter your comment!
Please enter your name here