ವೇಣೂರು: ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ಕಾಂತರಬೆಟ್ಟು ಎಂಬಲ್ಲಿ ಸುಕೀತ್ ಎಂಬಾತ ಮನೆಯ ಸಮೀಪ ತೋಟದ ಜಮೀನಿನ ಬಳಿ ಅಕ್ರಮವಾಗಿ ಮರಳುಗಾರಿಕೆ ನಡೆಸಿ ಸಂಗ್ರಹಿಸಿಟ್ಟ ಘಟನೆಗೆ ಸಂಬಂಧಿಸಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಮರಳುಗಾರಿಕೆ ನಡೆಸಿ ತೋಟದಲ್ಲಿ ರೂ 1,70,000-00 ಮೌಲ್ಯದ ಸುಮಾರು 150-170 ಟನ್ ಗಳಷ್ಟು ಮರಳನ್ನು ತೋಟದಲ್ಲಿ ಸಂಗ್ರಹಿಡಲಾಗಿತ್ತು ಎನ್ನಲಾಗಿದೆ.

