ಆರೋಗ್ಯ ಭಾರತಿ ಹೆಬ್ರಿ : ಶ್ರೀ ಧನ್ವಂತರಿ ಜಯಂತಿ ಆಚರಣೆ

0
14

ಆರೋಗ್ಯಭಾರತಿ ಉಡುಪಿ  ಜಿಲ್ಲಾ ಸಮಿತಿ ಮತ್ತು ಆರೋಗ್ಯಭಾರತಿ ಹೆಬ್ರಿ ತಾಲೂಕು ಸಮಿತಿ ಇವರ ಸಹಭಾಗಿತ್ವದಲ್ಲಿ ತಾ.19.10.2025 ರ ಆದಿತ್ಯವಾರದಂದು ಹೆಬ್ರಿಯ ಶ್ರೀ ರಾಮಮಂದಿರದಲ್ಲಿ ಬೆಳಿಗ್ಗೆ 10.30 ಕ್ಕೆ ಶ್ರೀ ಧನ್ವಂತರಿ ಜಯಂತಿ
ಆಚರಿಸಲಾಯಿತು . ದೀಪ ಪ್ರಜ್ವಲನ ಮತ್ತು ಶ್ರೀ ಧನ್ವಂತರಿ ಆರತಿಯಲ್ಲಿ ಪ್ರಾರಂಭವಾದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತ ಪ್ರಾಂಶುಪಾಲ ಮತ್ತು ಲೇಖಕರಾದ ಡಾ.ಸತ್ಯನಾರಾಯಣ ಭಟ್ .ಆರೋಗ್ಯಭಾರತಿ ಉಡುಪಿ ಜಿಲ್ಲಾಧ್ಯಕ್ಷರಾದ ಡಾ.ದಿನೇಶ್ ನಾಯಕ್, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಸಹ ಕಾರ್ಯದರ್ಶಿ ಕೃಷ್ಣರಾಜ ಸಾಮಗ, ಜಿಲ್ಲಾ ಸಂಯೋಜಕ ಗಣೇಶ ಶೆಣೈ ಬೈಲೂರು, ಹೆಬ್ರಿ ತಾಲೂಕು ಅಧ್ಯಕ್ಷ ಡಾ ರವಿಪ್ರಸಾದ ಹೆಗ್ಡೆ, ಉಪಾಧ್ಯಕ್ಷೆ ಡಾ. ಭಾರ್ಗವಿ ಐತಾಳ್ , ಡಾ ಸರಿತಾ, ಡಾ ಸುಷ್ಮಾ ಹೆಗ್ಡೆ ಹಿರಿಯರಾದ ಬಾಲಕೃಷ್ಣ ಮಲ್ಯ, ಸುಧೀರ ನಾಯಕ್, ಕೃಷ್ಣ ಪ್ರಭು, ಉದ್ಯಮಿ ಬಾಲಕೃಷ್ಣ ನಾಯಕ್, ಸದಾನಂದ ನಾಯಕ್ ಹೆಬ್ರಿ, ರಾಮಮಂದಿರದ ವ್ಯವಸ್ಥಾಪಕ ಉಮೇಶ ನಾಯಕ್ ಮತ್ತಿತರ ಗಣ್ಯರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಡಾ.ಸತ್ಯನಾರಾಯಣ ಭಟ್ ಅವರು ಬರೆದ  “ಆಯುರ್ವೇದ ಭೀಷ್ಮ ಎಡತೊರೆ ಪಾರ್ಥನಾರಾಯಣ ಪಂಡಿತರು” ಪುಸ್ತಕದ ಲೋಕಾರ್ಪಣೆ ಆಯಿತು. ಸಭಾಧ್ಯಕ್ಷ ಡಾ. ರವಿ ಪ್ರಸಾದ  ಹೆಗಡೆಯವರು ಅಧ್ಯಕ್ಷೀಯ ಭಾಷಣ ನೀಡಿದರು.ಹೆಬ್ರಿ  ತಾಲೂಕು ಕಾರ್ಯದರ್ಶಿ ಹೆಬ್ರಿ ಕೇಶವ ನಾಯಕರು ಕಾರ್ಯಕ್ರಮ ನಿರೂಪಿಸಿದರು ಮತ್ತು ಸಹ ಕಾರ್ಯದರ್ಶಿ ವಿಘ್ನೇಶ ನಾಯಕ್  ಧನ್ಯವಾದ ಸಮರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here