ಸುಳ್ಳು ಆರೋಪ ದಡಿ ಛತ್ತೀಸ್ಗಡದಲ್ಲಿ ಕ್ರೈಸ್ತ ಸನ್ಯಾಸಿಯರನ್ನು ಬಂಧಿಸಿರುವುದು ಖಂಡನೀಯ

0
61

ಛತ್ತೀಸ್ಗಡ ರಾಜ್ಯದಲ್ಲಿ ಜುಲೈ 25ರಂದು ಇಬ್ಬರು ಕ್ರೈಸ್ತ ಸನ್ಯಾಸಿಯರನ್ನು ಮಾನವ ಕಳ್ಳ ಸಾಗಣೆ ಆರೋಪದಡಿ ಹಾಗೂ ಇನ್ನಿತರ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗಿದೆ. ಇದು ಖಂಡನೀಯ. ಪೋಷಕರ ಲಿಖಿತ ಒಪ್ಪಿಗೆಯ ಮೇರೆಗೆ ಕಾನ್ವೆಂಟಿನ ಮನೆ ಕೆಲಸಕ್ಕಾಗಿ ಕಾನೂನು ಬದ್ಧ ವಯಸ್ಕ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕ್ರೈಸ್ತ ಸನ್ಯಾಸಿಯರನ್ನು ಸುಳ್ಳು ಆರೋಪದಡಿ ಛತ್ತೀಸ್ಗಡ ಸರಕಾರ ಬಂದಿಸಿರುತ್ತದೆ. ಈ ರೀತಿ ಸುಳ್ಳು ಆರೋಪದಡಿ ಬಂದಿಸುವುದು, ಆರ್ಥಿಕತೆಯ ಮೇಲೆ ಮಹಾನ್ ಹೊಡೆತ ಬೀಳುವ ಸಂಭವವಿದ್ದು ಕಾರ್ಮಿಕರು ಕೂಡ ಬೀದಿಗೆ ಬೀಳುವ ಸಂಭವನೀಯತೆ ಇದೆ. ಸುಳ್ಳು ಆರೋಪವನ್ನು ವಹಿಸಿರುವುದು ಇಡೀ ಕ್ರೈಸ್ತ ಸಮುದಾಯಕ್ಕೆ ನೋವನ್ನು ಉಂಟು ಮಾಡಿರುತ್ತದೆ. ಅಲ್ಲದೆ ದೇಶದ ವಿವಿಧೆಡೆ ಕ್ರೈಸ್ತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದೌರ್ಜನ್ಯ ಮತ್ತು ಹಲ್ಲೆಗಳು ನಡೆಯುತ್ತಿರುವುದು ಕೂಡ ಖಂಡನೀಯವಾಗಿದೆ.
ಛತ್ತೀಸ್ಗಡ ಹಾಗೂ ಕೇಂದ್ರ ಸರ್ಕಾರವು ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು ಭಂದಿಸಲ್ಪಟ್ಟ ಕ್ರೈಸ್ತ ಸನ್ಯಾಸಿಯರನ್ನು ಬಿಡುಗಡೆಗೊಳಿಸಬೇಕೆಂದು ಆಗಸ್ಟ್ ನಾಲ್ಕರಂದು ಸಂಜೆ 4:00ಗೆ ಮಂಗಳೂರು ಪ್ರದೇಶ ಕೇಂದ್ರೀಯ ಸಮಿತಿಯ ಕೆಥೋಲಿಕ್ ಸಭಾದ 124 ವಿಭಾಗಗಳು ಮಂಗಳೂರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಾರ್ವಜನಿಕ ಹೋರಾಟವನ್ನು ಹಮ್ಮಿಕೊಳ್ಳುವ ನಿರ್ಧಾರ ಮಾಡಿರುತ್ತದೆ . ಈ ಹೋರಾಟದಲ್ಲಿ ಕೆಥೋಲಿಕ್ ಸಭಾದ ಸುಮಾರು ಎಂಟರಿಂದ ಹತ್ತು ಸಾವಿರ ಮಂದಿ ಭಾಗವಹಿಸುವರು. ಎಂದು ಕೆಥೋಲಿಕ್ ಸಭಾ ಕರ್ನಾಟಕ ಪ್ರಾಂತ್ಯದ ಸಂಚಾಲಕ ಅಲ್ವಿನ್ ಮಿನೇಜಸ್, ಸಭಾದ ಮೂಡುಬಿದಿರೆ ಅಧ್ಯಕ್ಷ ಅಲ್ವಿನ್ ರೋಡ್ರಿಗಸ್ ,ರಾಜಕೀಯ ಸಂಚಾಲಕ ರೊನಾಲ್ಡ ಸೆರಾವೊ, ಮುಖಂಡರುಗಳಾದ ರಾಜೇಶ್ ಡಿಸೋಜ, ಅನೀಶ್ ಡಿಸೋಜಾ, ರಾಜೇಶ್ ಕಡಲಗೆರೆ ಇತ್ಯಾದಿಯರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here