ಶ್ರೀ ರಾಮಕೃಷ್ಣ ಭಜನಾ ಮಂದಿರ (ರಿ) ಕುಪ್ಪೆಪದವು ಇದರ ಆಶ್ರಯದಲ್ಲಿ 45ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕೆ
ಫ್ರೆಂಡ್ಸ್ ಮುತ್ತೂರು ಇವರ ಸಾರಥ್ಯದಲ್ಲಿ Mutturda pili ದ್ವಿತೀಯ ವರ್ಷದ ಕಲಾ ಕಾಣಿಕೆ . ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಕೊರಗ ತನಿಯಜ್ಜನ ಕಟ್ಟೆ ಬೆಂಜನಪದವು ಇದರ ಧರ್ಮದರ್ಶಿಗಳು ಆದ ವಿಜಯ್ ಬೆಂಜನಪದವು ಇವರು ಶ್ರೀ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆಯನ್ನು ಫ್ರೆಂಡ್ಸ್ ಮುತ್ತೂರು ಇದರ ಸದಸ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿದೆ.
ದಿನಾಂಕ ಆಗಸ್ಟ್ 28ನೇ ಗುರುವಾರ ಸಂಜೆ 7ಗಂಟೆಗೆ ಮುತ್ತೂರು ಮಾರ್ಗದಂಗಡಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಊದುಪೂಜೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ಖ್ಯಾತ ನಿರೂಪಕ ವಿ.ಜೆ ಮಧುರಾಜ್ ಗುರುಪುರ ನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಕಲಾವಿದರು, ಗಣ್ಯರು ಹುಲಿವೇಷ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ