ಸೌಜನ್ಯ ಮಹಿಳಾ ಮಂಡಲದಲ್ಲಿ ‘ಸಂಘಟನೆ ಮತ್ತು ನಾವು’ ವಿಷಯದ ಕುರಿತು ಅರುಣ ನಾಗರಾಜ್ ಉಪನ್ಯಾಸ

0
5

ಸೌಜನ್ಯ ಮಹಿಳಾ ಮಂಡಲ (ರಿ.), ಹೊಯಿಗೆಬೈಲ್, ಉರ್ವ, ಮಂಗಳೂರು . ಈ ಸಂಸ್ಥೆಯ ವತಿಯಿಂದ ಅಧ್ಯಕ್ಷೆ ನಳಿನಿ ರೈಯವರ ನೇತೃತ್ವದಲ್ಲಿ ‘ಶಿವಗಿರಿ’ಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ “ಸಂಘಟನೆ ಮತ್ತು ನಾವು” ಎಂಬ ವಿಷಯದ ಬಗ್ಗೆ ಸಾಹಿತಿ ಹಾಗೂ ಕವಯಿತ್ರಿಯಾದ ನಿವೃತ್ತ ಶಿಕ್ಷಕಿ ಅರುಣ ನಾಗರಾಜ್ ವಿವರವಾಗಿ ಮನಮುಟ್ಟುವಂತೆ ವಿಚಾರವನ್ನು ಮಂಡಿಸಿದರು.

ವಿಚಾರ ಮಂಡನೆಯ ನಂತರ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಅವರಿಗೆ ಶಾಲು ಹೊಂದಿಸಿ, ಫಲ ಪುಷ್ಪಗಳನ್ನು ನೀಡಿ ಗೌರವಿಸಲಾಯಿತು.

ಗೌರವಾಧ್ಯಕ್ಷ ಕೆ.ಎ. ರೋಹಿಣಿಯವರು ಸ್ವಾಗತಿಸಿ, ಗೌರವ ಸಲಹೆಗಾರರಾದ ರತ್ನಾವತಿ ಜೆ. ಬೈಕಾಡಿ ಪರಿಚಯಿಸಿ, ಉಪಾಧ್ಯಕ್ಷರಾದ ರಾಜೇಶ್ವರಿ ಎಸ್. ರಾವ್ ವಂದಿಸಿದರು. ಖಜಾಂಚಿ ಸುಶೀಲಾ ಪುರುಷೋತ್ತಮ್ ಮತ್ತು ಜಯಲಕ್ಷ್ಮಿ ಬಾಲಕೃಷ್ಣ, ರಜನಿ ಸಂತೋಷ್, ಹಿರಿಯ ಸದಸ್ಯ ಅನಸೂಯ ಹೊನ್ನಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here