ಅರುವ ಯಕ್ಷಗಾನ ತರಬೇತಿ ಕೇಂದ್ರ ಅಳದಂಗಡಿ

0
22

ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಇದರ ವತಿಯಿಂದ ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ನಲ್ಲಿ ಜು.27 ರಂದು ಅರುವ ಯಕ್ಷಗಾನ ತರಬೇತಿ ಪ್ರಾರಂಭವಾಯಿತು.

ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯರು ಹಾಗೂ ಸಮಾಜ ಸೇವಾ ಮನೋಭಾವನೆಯ ಎ.ಶಶಿಧರ ಶೆಟ್ಟಿ ಅರುವ ಇವರು ದೀಪ ಪ್ರಜ್ವಲಿಸುವ ಮೂಲಕ ಮಕ್ಕಳು ಸಂಸ್ಕಾರ ಮತ್ತು ಸಂಸ್ಕೃತಿ ಕಲಿಯಲು ಇಂತಹ ಯಕ್ಷಗಾನ ತರಬೇತಿ ಕೇಂದ್ರ ಹೆಚ್ಚಿನ ಕೆಲಸ ಮಾಡಲಿ ಅರುವ ಎಂದಾಕ್ಷಣ ಎರಡು ಯಕ್ಷಗಾನ ಕಲಾವಿದರ ಹೆಸರು ನೆನಪಿಗೆ ಬರುತ್ತದೆ ಅರುವ ಕೊರಗಪ್ಪ ಶೆಟ್ಟಿ ಮತ್ತು ಅರುವ ನಾರಾಯಣ ಶೆಟ್ಟಿ ಇವರನ್ನು ನೆನಪಿಸಲೇ ಬೇಕಾಗುತ್ತದೆ. ಆದುದರಿಂದ ಆಮಂತ್ರಣ ಪ್ರತಿಷ್ಠಾನ ಮಾಡುವ ಈ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಅವಶ್ಯವಾಗಿ ವಿದ್ಯಾರ್ಥಿಗಳು ಸೇರ್ಪಡೆ ಗೊಳ್ಳಲಿ ಎಂದು ಹಾರೈಸಿದರು.

ಈ ಸಂಧರ್ಭದಲ್ಲಿ ಯಕ್ಷಗಾನ ತರಬೇತಿ ಗುರುಗಳಾದ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಇವರಿಗೆ ಗುರುಕಾಣಿಕೆ ಸಲ್ಲಿಸಿದ ವಿದ್ಯಾರ್ಥಿಗಳು . ನಾಟಕ ಕಲಾವಿದ ಹಾಗೂ ಐಸಿರಿ ಆರ್ಟ್ಸ್ ಅರುವ ಇದರ ಮಾಲಕರಾದ ದರ್ಶನ್ ಶೆಟ್ಟಿ, ಪ್ರಪುಲ್ಲ ಟೆಕ್ಸ್ ಟೈಲ್ಸ್ ಮಾಲಕ ಪ್ರದೀಪ್ ಕುಮಾರ್, ಮಹಮ್ಮಾಯೀ ಸ್ಪೋರ್ಟ್ಸ್ ಕ್ಲಬ್ ಸುಲ್ಕೇರಿಯ ದಯಾಕರ ರೈ , ಭಾಜಪ ಕಾರ್ಯಕರ್ತ ಸದಾಶಿವ ಕರಂಬಾರು, ರಾಜೇಂದ್ರ ದೇವಾಡಿಗ ಆನೆಮಹಲ್,ಶ್ರೀ.ಧ.ಮಂ.ಶಾಲೆ ಧರ್ಮಸ್ಥಳ ಇಲ್ಲಿಯ ಶಿಕ್ಷಕಿ ರಾಜೇಶ್ವರಿ, ಮಹಾಗಣಪತಿ ಹಾರ್ಡ್ ವೇರ್ ಮಾಲಕ ಚಂದ್ರಶೇಖರ್ ಅರುವ, ಹರೀಶ್ ಕುಲಾಲ್ ನಾವರ, ಅಶ್ವಿನಿ ಪಿಲ್ಯ, ನಮಿತಾ ಅಳದಂಗಡಿ, ಪವಿತ್ರ ಅಳದಂಗಡಿ, ಜ್ಯೋತಿ ಸುಲ್ಕೇರಿ, ಮುಂತಾದವರು ಉಪಸ್ಥಿತರಿದ್ದರು.

ಆಮಂತ್ರಣ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಕುಮಾರ್ ಸ್ವಾಗತಿಸಿದರು, ಟ್ರಸ್ಟಿ ಅರುಣ್ ಅರುವ ಧನ್ಯವಾದ ಸಲ್ಲಿಸಿ ಸರ್ವರ ಸಹಕಾರ ಯಾಚಿಸಿದರು.

LEAVE A REPLY

Please enter your comment!
Please enter your name here