ಡಾ.ಬಿ.ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿಯ ಕಾಲೇಜು ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕ ಮಹಿಳಾ ಪುರಸ್ಕಾರಬ ನೀಡಿ ಗೌರವಿಸಲಾಯಿತು.
ಜೆ.ಸಿ.ಐ ಕುಂದಾಪುರ ಸಿಟಿ ಇವರ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಿಂದ ಸಾಧನೆ ಮಾಡಿದ ಸಾಧಕ ಸ್ತ್ರೀ ಪುರಸ್ಕಾರ ಕುಮಾರಿ ಬ್ರಾಹ್ಮೀ ಬಳ್ಕೂರು ಪಡೆದಿರುತ್ತಾರೆ.

ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ನಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಬ್ರಾಹ್ಮೀ ಭರತನಾಟ್ಯ,ನೃತ್ಯ ಕಲೆ ,ಸಾಂಸ್ಕೃತಿಕ ಕಾರ್ಯಕ್ರಮದ ನೀಡುವುದರ ಮೂಲಕ ಜನ ಮನ್ನಣೆ ಪಡೆದಿರುವ ಈಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯೂ ಒಲಿದು ಬಂದಿರುತ್ತದೆ.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಈಕೆ ಅನೇಕ ಶಿಭಿರದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆಯ ಉಜ್ವಲ ಭವಿಷ್ಯ ಮತ್ತಷ್ಟು ಬೆಳೆಯಲಿ ಎಂಬುದು ಹರಕೆ ಹಾರೈಕೆ.

