ಜೆ.ಸಿ.ಐ ಕುಂದಾಪುರ ಸಿಟಿ ಇವರ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಿಂದ ಸಾಧನೆ ಮಾಡಿದ ಸಾಧಕ ಸ್ತ್ರೀ ಪುರಸ್ಕಾರ ಶ್ರೀ ಶ್ರೇಯಾ ನಾಗರಾಜ್ ಖಾರ್ವಿ ಪಡೆದಿರುತ್ತಾರೆ.
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಾ ನಾಗರಾಜ್ ಖಾರ್ವಿ ಸಂಗೀತದಲ್ಲಿ ಅಪಾರ ಶ್ರದ್ಧೆ ಹಾಗೂ ಭಕ್ತಿಯಿಂದ ಹಾಡುತ್ತಿರುವುದು ಅಪಾರ ಪ್ರಮಾಣದ ಅಭಿಮಾನಿ ಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ದೇಶ ಭಕ್ತಿಗೀತೆ ,ಜಾನಪದ ಹಾಡು ,ಭಕ್ತಿಗೀತೆ,ಸಿನಿಮಾ ಹಾಡುಗಳಿಗೆ ಭಾವ ತುಂಬಿಹಾಡುವ ಹಾಡು ಜನಮನ್ನಣೆ ಪಡೆಯುತ್ತಿದೆ.

ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಈಕೆ ರಾಷ್ಟ್ರಮಟ್ಟದ ಭಾವೈಕ್ಯತಾ ಶಿಭಿರದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆಯ ಉಜ್ವಲ ಭವಿಷ್ಯ ಮತ್ತಷ್ಟು ಬೆಳೆಯಲಿ ಎಂಬುದು ಹರಕೆ ಹಾರೈಕೆ.

