ವರದಿ:ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

ತುಳುನಾಡು: ತುಳುನಾಡಿನ ಆರಾಧ್ಯ ದೇವರಾದ ತುಳುವೇಶ್ವರನ ಸನ್ನಿಧಿಯಲ್ಲಿ ದೇವರಿಗೆ ಮಂಗಳಾರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿ ಜೀರ್ಣೋದ್ಧಾರದ ಬಗ್ಗೆ ಅಷ್ಟಮಂಗಲ ಪ್ರಶ್ನ ಚಿಂತನೆ ಪ್ರಾರಂಭವಾಗಿದೆ. ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ನೇತೃತ್ವದಲ್ಲಿ ತಂಡ ಪ್ರಶ್ನ ಚಿಂತನೆ ಆರಂಭಿಸಿದ್ದು, ತುಳು ವರ್ಲ್ಡ್ ಸಂಸ್ಥೆಯ ಮುಖ್ಯಸ್ಥರು ಮತ್ತು ಸದಸ್ಯರು, ತುಳುವ ಮಹಾಸಭೆ ಹಲವು ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರುಗಳು, ಊರ ಗಣ್ಯರು, ಹೊರ ಊರಿನ ಭಕ್ತಾದಿಗಳ ಮತ್ತು ಸ್ಥಳೀಯ ಭಕ್ತರ ಉಪಸ್ಥಿತಿಯೊಂದಿಗೆ ಶಾಸ್ತ್ರೋಕ್ತವಾಗಿ ವಿಧಿವತ್ತಾಗಿ ಪ್ರಶ್ನ ಚಿಂತನೆ ಆರಂಭವಾಗಿದ್ದು ಕೆಲ ದಿನಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ, ಪ್ರಶ್ನ ಚಿಂತನೆ ಕಾರ್ಯಕ್ರಮದ ಪತ್ರಿಕಾ ವರದಿ ಮತ್ತು ನೇರ ಪ್ರಸಾರವನ್ನು ತುಳುನಾಡು ವಾರ್ತೆ ಮಾಡುತ್ತಿದ್ದು, ಲಿಂಕ್ ಉಪಯೋಗಿಸಿ ಈ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ ಎಂದು ತುಳುನಾಡು ವಾರ್ತೆ ಮತ್ತು ದೇವಸ್ಥಾನದ ಮೂಲಗಳು ತಿಳಿಸಿವೆ.
