ಅಶ್ವಿನಿ ತೆಕ್ಕುಂಜ ಕುರ್ನಾಡ್ ಇವರಿಗೆ ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ

0
186

ಮಂಗಳೂರು: ಅಶ್ವಿನಿ ತೆಕ್ಕುಂಜ ಕುರ್ನಾಡ್ ಅವರು ಕನ್ನಡ ಉಪನ್ಯಾಸಕಿಯಾಗಿದ್ದು, ಕನಸು ಎಂಬ ಕಾವ್ಯನಾಮವನ್ನು ಹೊಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆಯ ಮೂಲಕವೇ ತನ್ನ ಛಾಪನ್ನು ಮೂಡಿಸುತ್ತಿದ್ದು, ಸಾಹಿತಿಯಾಗಿ, ಕವಯಿತ್ರಿಯಾಗಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ.
ಇವರು ಸೆಪ್ಟೆಂಬರ್ 14ರಂದು ದೇರಳಕಟ್ಟೆಯಲ್ಲಿ ನಡೆದ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಭಾವೈಕ್ಯತಾ ಸಾಹಿತ್ಯ ರತ್ನ’ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here